
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಕ್ಷೇಪಾರ್ಹ ಟ್ವೀಟ್ ಹಿನ್ನೆಲೆಯಲ್ಲಿ ಬಂಧನಕ್ಕೀಡಾಗಿದ್ದ ಸ್ಯಾಂಡಲ್ ವುಡ್ ನಟ ಚೇತನ್ ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದರೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ಫೆ.22ರಂದು ಬಂಧನಕ್ಕೀಡಾಗಿದ್ದ ನಟ ಚೇತನ್ ಅವರಿಗೆ ಫೆ.23ರಂದು 8ನೇ ಎಸಿಎಂಎಂ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ನಟ ಚೇತನ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಫೆ.25ರಂದು ವಿಚಾರಣೆ ನಡೆಸಿದ 32ನೇ ಎಸಿಎಂಎಂ ಕೋರ್ಟ್ ಚೇತನ್ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು.
ಜಾಮೀನು ಸಿಕ್ಕರೂ ನಟ ಚೇತನ್ ಬಿಡುಗಡೆಯಾಗಿಲ್ಲ. ಕಾರಣ ಚೇತನ್ ಗೆ ಸಂಬಂಧಿಸಿದ ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಇನ್ನೂ ಎರಡು ದಿನಗಳ ಕಾಲ ಜೈಲಿನಲ್ಲಿಯೇ ಕಾಲ ಕಳೆಯಬೇಕಾದ ಸ್ಥಿತಿ ಎದುರಾಗಿದೆ. ಇಂದು ನಾಲ್ಕನೇ ಶನಿವಾರ ಹಾಗೂ ನಾಳೆ ಭಾನುವಾರವಾದ್ದರಿಂದ ಕೋರ್ಟ್ ಗೆ ರಜೆ ಇರುವುದರಿಂದ ಸೋಮವಾರ ಬಾಂಡ್ ಪ್ರಕ್ರಿಯೆ ಪೂರ್ಣಗೊಂಡಬಳಿಕ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಉಕ್ರೇನ್ ನಿಂದ 480 ಭಾರತೀಯರ ಏರ್ ಲಿಫ್ಟ್ ಗೆ ಸಿದ್ಧತೆ