
ಪ್ರಗತಿವಾಹಿನಿ ಸುದ್ದಿ; ಬ್ರಾಸಿಲಿಯ: ಕಾರಿನಲ್ಲಿಯೇ ಭಿಕ್ಷುಕನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಪತ್ನಿಯನ್ನು ಕಂಡ ಜಿಮ್ ಟ್ರೇನರ್ ಓರ್ವ ಆಘಾತಕ್ಕೊಳಗಾದ ಘಟನೆ ನಡೆದಿದೆ.
ಬ್ರೆಜಿಲ್ ನ ಫೆಡರಲ್ ಜಿಲ್ಲೆಯ ಜರ್ದಿಮ್ ರೊರಿಝ್ ನಲ್ಲಿ ಈ ಘಟನೆ ನಡೆದಿದ್ದು, ಜಿಮ್ ಟ್ರೇನರ್ ಎಡ್ವರ್ಡ್ ಅಲ್ವೆಸ್ ಎಂಬಾತ ತನ್ನ ಪತ್ನಿ ನಿರಾಶ್ರಿತ ಅಥವಾ ಭಿಕ್ಷುಕನೊಂದಿಗೆ ಕಾರಿನಲ್ಲಿ ಲೈಂಗಿಕ ಕ್ರಿಯಲ್ಲಿ ತೊಡಗಿರುವುದನ್ನು ಕಂಡು ಶಾಕ್ ಆಗಿದ್ದಾನೆ. ಕೋಪಗೊಂಡು ಕಾರಿನ ಗಾಜು ಒಡೆಯಲು ಯತ್ನಿಸಿದ್ದಾನೆ. ಕಾರಿನ ಬಾಗಿಲು ತೆರೆದು ಒಳಗೆ ನುಗ್ಗಿ ನಿರ್ಗತಿಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆದರೆ ಅಷ್ಟರಲ್ಲಿ ಆತ ಕೈಯಲ್ಲಿ ಬಟ್ಟೆ ಹಿಡಿದು ಬೆತ್ತಲಾಗಿಯೇ ಕಾರಿನಿಂದ ಕೆಳಗಿಳಿದು ಓಡಿ ಹೋಗಿದ್ದಾನೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎಡ್ವರ್ಡ್ ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಆಕೆ ನಿರಾಶ್ರಿತರಿಗೆ ಸಹಾಯ ಮಾಡುವಂತೆ ದೇವರಿಂದ ತನಗೆ ಸಂದೇಶ ಬಂದಿತ್ತು ಅದಕ್ಕಾಗಿ ಹೀಗೆ ಮಾಡಿದ್ದಾಗಿ ಸಮರ್ಥಿಸಿಕೊಂಡದ್ದಾಳೆ. ಪತ್ನಿ ಮಾತು ಕೇಳಿ ಇನ್ನಷ್ಟು ಶಾಕ್ ಆಗಿದ್ದಾನೆ ಜಿಮ್ ಟ್ರೇನರ್.
ಈ ಬಗ್ಗೆ ಎಡ್ವರ್ಡ್ ಅಲ್ವೆಸ್ ದೂರು ನೀಡಿದ್ದು, ಅಧಿಕಾರಿಗಳು ಹೇಳುವ ಪ್ರಕಾರ ಕಾರಿನಲ್ಲಿ ಎಡ್ವರ್ಡ್ ಪತ್ನಿ ನಿರಾಶ್ರಿತನೊಂದಿಗೆ ಒಮ್ಮತದಿಂದಲೆ ಸಂಬಂಧ ಹೊಂದಿದ್ದಳು. ಆಕೆ ಹೇಳುವ ಪ್ರಕಾರ ತಾನು ಪ್ರತಿದಿನ ಹಾಜರಾಗುತ್ತಿದ್ದ ಚರ್ಚ್ ಮೂಲಕ ದುರ್ಬಲ ಜನರಿಗೆ ಸಹಾಯ ಮಾಡುವುದನ್ನು ಆನಂದಿಸುತ್ತಿದ್ದೆ. ದೇವರಿಂದ ಸಂದೇಶ ಪಡೆದ ಬಳಿಕ ಈ ರೀತಿ ಮಾಡಿದೆ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ. ಪತ್ನಿಯ ಸಮರ್ಥನೆ ಕೇಳಿ ಪತಿ ಎಡ್ವರ್ಡ್ ಮತ್ತಷ್ಟು ಆಘಾತಕ್ಕೀಡಾಗಿದ್ದಾರೆ.
ಸೆಕ್ಸ್ ವಿಡಿಯೋ ಇದೆ ಎಂದು ಶಿರಸ್ತೆದಾರನಿಗೆ ಬ್ಲ್ಯಾಕ್ ಮೇಲ್