
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಿರ್ಭಯಾ ಗ್ಯಾಂಗ್ ರೇಪ್ ಹಾಗೂ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್ ಅವರಿಗೆ ಸ್ಯಾಂಡಲ್ ವುಡ್ ನಟ ನವರಸ ನಾಯಕ ಜಗ್ಗೇಶ್ ಉಡುಗೊರೆ ಘೋಷಿಸಿದ್ದಾರೆ.
ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಜವಾಬ್ದಾರಿಯನ್ನು ಹ್ಯಾಂಗ್‍ಮ್ಯಾನ್ ಪವನ್ ಜಲ್ಲಾದ್ ಅವರಿಗೆ ಪೊಲೀಸ್ ಇಲಾಖೆ ವಹಿಸಿದ್ದು, ಈ ಕುರಿತು ಪ್ರತಿಕ್ರಿಯಿಸಿದ್ದ ಪವನ್ ಜಲ್ಲಾದ್, ಅಪರಾಧಿಗಳನ್ನು ಗಲ್ಲಿಗೇರಿಸಿದರೆ 1 ಲಕ್ಷ ಹಣ ನೀಡುವುದಾಗಿ ಸರ್ಕಾರ ಘೋಷಿಸಿ, ನನಾಗೆ ಈ ಕೆಲಸ ವಹಿಸಿದೆ. ಇದರಲ್ಲಿ ಬರುವ ದುಡ್ಡಿನಲ್ಲಿ ನನ್ನ ಮಗಳ ಮದುವೆ ಮಾಡುತ್ತೇನೆ. ನಾನು ಬಡತನದಿಂದ ಕುಸಿದು ಹೋಗಿದ್ದೆ. ಈಗ ಈ ಕರ್ತವ್ಯ ನಿರ್ವಹಿಸಲು ಹೇಳಿದ್ದಾರೆ. ಹೀಗಾಗಿ ನನಗೆ ಒಂದು ಲಕ್ಷ ದುಡ್ಡು ಬರುತ್ತದೆ. ಅದರಲ್ಲಿ ಮಗಳ ಮದುವೆ ಮಾಡುತ್ತೇನೆ. ಇದು ನನ್ನ ಮಗಳ ಮದುವೆಗೆ ಹಣ ಹೊಂದಿಸುವುದಕ್ಕಾಗಿ ದೇವರೇ ಕೊಟ್ಟ ಅವಕಾಶ ಎಂದು ಭಾವುಕರಾಗಿ ನುಡಿದಿದ್ದರು.
ಈ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ನಟ ಜಗ್ಗೇಶ್, ರಾಕ್ಷಸ ಸಂಹಾರ ದೇವರ ನಿಯಮ. ನೀವೆ ಆ ಪಾಪಿಗಳ ಸಂಹಾರ ಮಾಡಿದರೆ ನಾನು ಕಲೆಯಲ್ಲಿ ದುಡಿದ 1 ಲಕ್ಷ ರೂ ನಿಮಗೆ ದೇಣಿಗೆಯಾಗಿ ನೀಡುತ್ತೇನೆ. ಮಗಳ ಮದುವೆ ಮಾಡುವ ಎನ್ನುವ ನಿಮ್ಮ ಮಾತು ನನ್ನನ್ನು ಭಾವುಕನಾಗಿಸಿದೆ. ಇಂದೇ ನಾನು ದುಡಿದ ಹಣದಲ್ಲಿ ನಿಮಗೆ ದುಡ್ಡು ಎತ್ತಿಡುವೆ ಎಂದು ತಿಸಿದ್ದಾರೆ.
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಜನವರಿ 22ರಂದು ಬೆಳಿಗ್ಗೆ ಗಲ್ಲಿಗೇರಿಸುವಂತೆ ಕೋರ್ಟ್ ಆದೇಶಿಸಿದೆ. ಇದಕ್ಕೆ ಪೂರಕವಾಗಿ ಉತ್ತರ ಪ್ರದೇಶ ಸರ್ಕಾರ ಕೂಡ ಸಿದ್ಧತೆ ನಡೆಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ