Latest

ಇದು ನಿಜಕ್ಕೂ ರಾಯರ ಪವಾಡ; ನಿರೀಕ್ಷೆಯಿಲ್ಲದೇ ರಾಜ್ಯಸಭೆಗೆ ಟಿಕೆಟ್; ಸಂತಸ ವ್ಯಕ್ತಪಡಿಸಿದ ಜಗ್ಗೇಶ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಬಿಜೆಪಿಯಿಂದ ತಮ್ಮನ್ನು ಅಭ್ಯರ್ಥಿಯನ್ನಾಗಿ ಘೋಷಿಸಿರುವ ಹಿನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ನಟ ಜಗ್ಗೇಶ್, ಅನಿರೀಕ್ಷಿತವಾಗಿ ಬಂದ ಅವಕಾಶ. ಇದು ರಾಯರ ಪವಾಡ ಎಂದು ತಿಳಿಸಿದ್ದಾರೆ.

ನನಗೆ ನಿರೀಕ್ಷೆಯೇ ಇರಲಿಲ್ಲ. ಹಿರಿಯರು ಫೋನ್ ಮಾಡಿ ದಾಖಲೆಗಳನ್ನು ರೆಡಿ ಮಾಡಿಕೊಳ್ಳಲು ಹೇಳಿದರು. ಅಚ್ಚರಿಯಾಯಿತು. ರಾಯರ ಸಂಪೂರ್ಣ ಆಶಿರ್ವಾದದಿಂದ ನನಗೆ ಟಿಕೆಟ್ ಸಿಕ್ಕಿದೆ. ಅದಕ್ಕಾಗಿ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.

Home add -Advt

ಬಹಳ ನಿಷ್ಠೆಯಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿಗಳು, ಸ್ನೇಹಿತರು, ಶಾಸಕರು, ಸಂಘದ ಹಿರಿಯರು ಎಲ್ಲರೂ ಸೇರಿ ಈ ನಿರ್ಧಾರ ಮಾಡಿ ಟಿಕೆಟ್ ಕೊಟ್ಟಿದ್ದಾರೆ. ಪಕ್ಷ ಹಾಗೂ ಸಂಘಟನೆಗೆ ಧನ್ಯವಾದಗಳು. ನಾಳೆ ನಾಮಪತ್ರ ಸಲ್ಲಿಸುತ್ತೇನೆ. ನಿರೀಕ್ಷೆಯೇ ಇಲ್ಲದ್ದರಿಂದ ದಾಖಲೆ ಸಂಗ್ರಹಕ್ಕೆ ಸ್ವಲ್ಪ ತಡವಾಗಿದೆ. ಇಂದು ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಾಳೆ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ 4,000 ಸಹಾಯಧನ: ಮೋದಿ ಘೋಷಣೆ

Related Articles

Back to top button