Latest

ನಟ ನಂದಮೂರಿ ತಾರಕರತ್ನ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಟಾಲಿವುಡ್ ನ ಜನಪ್ರಿಯ ನಟ ನಂದಮೂರಿ ತಾರಕರತ್ನ (39) ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ನಿಧನರಾದರು.

ಆಸ್ಪತ್ರೆಯ ಐಸಿಯು ನಲ್ಲಿ ಅವರು 23 ದಿನಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು.

Related Articles

ನಂದಮೂರಿ ತಾರಕರತ್ನಗೆ ಜನವರಿ 27ರಂದು ಹೃದಯಾಘಾತವಾಗಿತ್ತು. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಬಳಿ ಟಿಡಿಪಿ ಪಾದಯಾತ್ರೆಯ ಸಂದರ್ಭದಲ್ಲಿ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ,ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆತರಲಾಗಿತ್ತು.

ನಾರಾಯಣ ಹೃದಯಾಲಯದ ಹಿರಿಯ ವೈದ್ಯರ ತಂಡ ನಂದಮೂರಿ ತಾರಕರತ್ನಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ ಅವರ ಆರೋಗ್ಯ ಗಂಭೀರವಾಗುತ್ತಲೇ ಹೋಯಿತು. ನಟ ಜ್ಯೂನಿಯರ್ ಎನ್‌ಟಿಆರ್, ರಾಜಕೀಯ ನಾಯಕರು, ಸಚಿವರುಗಳು ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ಆಗಮಿಸಿ ಆರೋಗ್ಯ ವಿಚಾರಿಸಿದ್ದರು.

Home add -Advt

ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷದ ಕಾರ್ಯಕರ್ತರು, ನಂದಮೂರಿ ತಾರಕರತ್ನ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ, ನಟ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು. ವೈದ್ಯರ ತಂಡದ ಜೊತೆ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದರು.

ನಂದಮೂರಿ ತಾರಕರತ್ನ ನಿಧನಕ್ಕೆ ತೆಲುಗು ದೇಶಂ ಪಕ್ಷದ ಮುಖ್ಯಸ್ಥ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ನಟ ಚಿರಂಜೀವಿ ಸೇರಿದಂತೆ ಹಲವಾರು ಗಣ್ಯರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್ : ಅಂಗಡಿ ಸಂಪೂರ್ಣ ಧ್ವಂಸ

https://pragati.taskdun.com/short-circuit-the-shop-is-a-complete-wreck/

ಸುರ್ಜೇವಾಲಾ ಕಾಂಗ್ರೆಸ್ ಆಂತರಿಕ ಕಲಹವನ್ನು ಮೊದಲು ಪರಿಹರಿಸಿಕೊಳ್ಳಲಿ: ಸಿಎಂ ಬೊಮ್ಮಾಯಿ

https://pragati.taskdun.com/let-surjewala-to-solve-infighting-of-congress-first-cm-bommai/

ಸುರ್ಜೇವಾಲಾ ಸ್ವಾಗತಿಸಿದ ಹೆಬ್ಬಾಳಕರ್ ಹಟ್ಟಿಹೊಳಿ

https://pragati.taskdun.com/surjewala-welcomed/

Related Articles

Back to top button