Latest

ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಗಂಭೀರ ಆರೋಪ

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಕನ್ನಡದ ಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ತನ್ನ ಸೋದರಳಿಯನ ಪತ್ನಿಯ ಮೇಲೆ ಹಲ್ಲೆ ನಡೆಸಿ, ಬಲವಂತದಿಂದ ವಿಷ ಕುಡಿಸಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಕೌಟುಂಬಿಕ ಕಲಹಕ್ಕೆ ರಾಜು ತಾಳಿಕೋಟೆ ತನ್ನ ಅಕ್ಕನ ಮಗ ಫಯಾಜ್ ಕರಜಗಿ ಪತ್ನಿ ಸನಾ ಕರಜಿಗಿ ಮೇಲೆ ಹಲ್ಲೆ ನಡೆಸಿ ವಿಷ ಕುಡಿಸಲು ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ. ಸನಾ ಕರಜಿಗಿ ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸನಾ ಕರಜಿಗಿ ತಾಯಿ ಫಾತಿಮಾ ಶಿರಹಟ್ಟಿ ವಿಜಯಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಟ ರಾಜು ತಾಳಿಕೋಟೆ, ಪತ್ನಿ ಪ್ರೇಮಾ ತಾಳಿಕೋಟೆ, ಫಯಾಜ್ ಕರಜಗಿ, ಸನಾ ಭಾವ ಪಿಂಟು ಸೇರಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ರಾಜು ತಾಳಿಕೋಟೆ ತನ್ನ ವಿರುದ್ಧ ಮಾಡುತ್ತಿರುವ ಆರೋಪಗಳು ಸುಳ್ಳು. ಸನಾ ಸಂಬಂಧಿಕರು ನನ್ನ ಮೇಲೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡು ತಾವು ಆಸ್ಪತ್ರೆಗೆ ದಾಖಲಾಗಿದ್ದಾಗಿ ಪ್ರತಿ ಆರೋಪ ಮಾಡಿದ್ದಾರೆ.

Home add -Advt

ದೋಣಿ ದುರಂತ; ಮೂವರು ಸಾವು; 8 ಜನರು ನಾಪತ್ತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button