Kannada NewsKarnataka News

ಮಲಪ್ರಭಾ ನದಿ ನೀರಿನ ಮಟ್ಟ 3 ಅಡಿ ಏರಿಕೆ -ಕಣಕುಂಬಿಯಲ್ಲಿ 171.4 ಮಿಮೀ ಮಳೆ

ಮಲಪ್ರಭಾ ನದಿ ನೀರಿನ ಮಟ್ಟ 3 ಅಡಿ ಏರಿಕೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ:

ಶುಕ್ರವಾರ ಇಡೀ ರಾತ್ರಿ ಖಾನಾಪುರ ತಾಲೂಕಿನಲ್ಲಿ ಬಿಡದೇ ಮಳೆ ಸುರಿದಿದೆ. ಒಂದೇ ರಾತ್ರಿ ಮಲಪ್ರಭಾ ನದಿಯಲ್ಲಿ ಮೂರು ಅಡಿಗಳಷ್ಟು ನೀರಿನ ಹರಿವು ಹೆಚ್ಚಿದೆ. ಕಣಕುಂಬಿ ಅರಣ್ಯದಲ್ಲಿ ಮಳೆ ಮುಂದುವರೆದಿದ್ದು, ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಸತತಧಾರೆಯ ಪರಿಣಾಮ ಹಗಲಿನಲ್ಲೇ ಕತ್ತಲು ಆವರಿಸಿದ್ದು, ತಾಲೂಕಿನ ಕಾನನದಂಚಿನ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಖಾನಾಪುರದಲ್ಲಿ 61.6 ಮಿಮೀ, ನಾಗರಗಾಳಿಯಲ್ಲಿ 50.8 ಮಿಮೀ, ಬೀಡಿಯಲ್ಲಿ 38.6 ಮಿಮೀ, ಕಕ್ಕೇರಿಯಲ್ಲಿ 42.2 ಮಿಮೀ,  ಅಸೋಗಾದಲ್ಲಿ 73.4 ಮಿಮೀ, ಗುಂಜಿಯಲ್ಲಿ 76 ಮಿಮೀ, ಲೋಂಡಾದಲ್ಲಿ ರೈಲ್ವೆ ಸ್ಟೇಶನ್ ನಲ್ಲಿ 68 ಮಿಮೀ, ಲೋಂಡಾದಲ್ಲಿ  68.8 ಮಿಮೀ, ಜಾಂಬೋಟಿಯಲ್ಲಿ 74.8 ಮಿಮೀ, ಕಣಕುಂಬಿಯಲ್ಲಿ 171.4 ಮಿಮೀ ಮಳೆಯಾಗಿದೆ.
ಕಳೆದ ತಿಂಗಳು ಭಾರೀ ಮಳೆ ಸುರಿದ ಸಂದರ್ಭದಲ್ಲಿ ಖಾನಾಪುರ ತಾಲೂಕು ಬಹುತೇಕ ಜಲಾವೃತವಾಗಿತ್ತು. ನಗರದ ಬಹುತೇಕ ಭಾಗ ಕೂಡ ಪ್ರಳಯವಾಗಿತ್ತು.
ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿ ನೀರಿನ ಮಟ್ಟ ಕೂಡ ನಿರಂತರ ಏರಿಕೆಯಾಗುತ್ತಿದೆ. ಕೃಷ್ಣಾ,  ಮಲಪ್ರಭಾ ಹಾಗೂ ಘಟಪ್ರಭಾ ನದಿ ತೀರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

Home add -Advt

Related Articles

Back to top button