Kannada NewsKarnataka News

ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಭರ್ಜರಿ ಮಳೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗುರುವಾರ ಬೆಳಗಿನ ಜಾವ ಭರ್ಜರಿ ಮಳೆಯಾಗುತ್ತಿದೆ.

ಬೆಳಗಿನಜಾವ 3 ಗಂಟೆಗೆ ಆರಂಭವಾದ ಮಳೆ 5 ಗಂಟೆಯ ನಂತರವೂ ಮುಂದುವರಿದಿತ್ತು. ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಸುರಿದು ನಂತರದಲ್ಲಿ ಸ್ವಲ್ಪ ಕ್ಷೀಣವಾಯಿತು. ಮಧ್ಯೆ ಮಧ್ಯೆ ಭಾರಿ ಸದ್ದಿನೊಂದಿಗೆ ಗುಡುಗು, ಸಿಡಿಲು ಅಬ್ಬರಿಸುತ್ತಿತ್ತು.

Home add -Advt

ಬುಧವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಉಂಟಾಗಿತ್ತು. ಆಗಲೇ ಮಳೆ ಬರುತ್ತೇನೋ ಎನ್ನುವ ಸ್ಥಿತಿ ಕಾಣಿಸುತ್ತಿತ್ತು. ಆದರೆ ಮತದಾನ ಮುಗಿಯುವವರೆಗೂ ಮಳೆಯಾಗಲಿಲ್ಲ. ಆದರೆ ಬೆಳಗಿನ ಜಾವ ಅನಿರೀಕ್ಷಿತವಾಗಿ ಮಳೆ ಏಕಾ ಏಕಿ ಅಬ್ಬರಿಸತೊಡಗಿತು. ಸುಮಾರು 15 ನಿಮಿಷ ಜೋರಾಗಿಯೇ ಸುರಿಯಿತು. ನಂತರದಲ್ಲಿ ಮಳೆಗಾಲದ ಮಳೆಯಮತೆ ಮಧ್ಯ ಮಧ್ಯೆ ಬಿಡುವು ನೀಡುತ್ತ ಮುಂದುವರಿದಿತ್ತು.

ಇನ್ನೂ 2 -3 ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

https://pragati.taskdun.com/congress-bjpclashmangaloremudushaddemithun-raicar/

Related Articles

Back to top button