ಪ್ರಗತಿವಾಹಿನಿ ಸುದ್ದಿ, ರಾಂಚಿ: ಪರೀಕ್ಷೆ ಎದುರಿಸಬೇಕಾದ ವಿದ್ಯಾರ್ಥಿನಿಯೊಬ್ಬಳ ಹಾಲ್ ಟಿಕೆಟ್ ನಲ್ಲಿ ಆಕೆಯ ಬದಲು ನಟಿ ಐಶ್ವರ್ಯಾ ರೈ ಫೋಟೊ ಮುದ್ರಿಸುವ ಮೂಲಕ ವಿಶ್ವವಿದ್ಯಾಲಯ ಎಡವಟ್ಟು ಮಾಡಿಕೊಂಡಿದೆ.
ಜಾರ್ಖಂಡ್ನ ಬಿನೋದ್ ಬಿಹಾರಿ ಮಹ್ತೊ ಕೊಯಲಾಂಚಲ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿ ಪರೀಕ್ಷೆಗಾಗಿ ಆನ್ಲೈನ್ನಲ್ಲಿ ಹಾಲ್ ಟಿಕೆಟ್ ಪಡೆದಿದ್ದಾರೆ. ಅದರಲ್ಲಿ ತಮ್ಮ ಫೋಟೊ ಬದಲು ಐಶ್ವರ್ಯಾ ರೈ ಫೋಟೊ ಮುದ್ರಣಗೊಂಡಿರುವುದನ್ನು ಕಂಡು ಬೆಚ್ಚಿಬಿದ್ದು ಪರೀಕ್ಷೆಯೇ ಕೈ ತಪ್ಪಿ ಹೋಗುವ ಆತಂಕದಿಂದ ವಿವಿ ಕುಲಪತಿಗೆ ದೂರು ನೀಡಿದ್ದಾಳೆ.
“ವಿದ್ಯಾರ್ಥಿನಿ ಯಾವ ಫೋಟೊ ನೀಡಿರುತ್ತಾರೋ ಅದನ್ನೇ ಹಾಲ್ ಟಿಕೆಟ್ ಹಾಗಿ ಬಳಸಲಾಗಿರುತ್ತದೆ. ಆದರೆ ಯಾರೋ ಕೆಲವರು ವಿವಿ ಹೆಸರು ಕೆಡಿಸಲು ಇಂಥ ಕುಕೃತ್ಯ ಮಾಡಿದ್ದಾರೆ” ಎಂದು ವಿವಿ ಕುಲಪತಿ ಹೇಳಿದ್ದಾರೆ.
ಇದೇ ವೇಳೆ ಇದೊಂದು ತಾಂತ್ರಿಕ ದೋಷವಾಗಿದ್ದು ವಿದ್ಯಾರ್ಥಿನಿಗೆ ತೊಂದರೆಯಾಗದಂತೆ ಸರಿಪಡಿಸಲಾಗುವುದು” ಎಂದು ವಿವಿ ಸಿಬ್ಬಂದಿ ಹೇಳಿದ್ದಾರೆ.
ಧಾರವಾಡ ಬಳಿ ಭೀಕರ ಅಪಘಾತ: ಮುನವಳ್ಳಿ ಯುವ ಕಾಂಗ್ರೆಸ್ ಅಧ್ಯಕ್ಷ ಯಶವಂತ ಯಲಿಗಾರ ಸೇರಿ ಇಬ್ಬರು ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ