Latest

ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದ ಸ್ಯಾಂಡಲ್ ವುಡ್ ನಟಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ಹಾಗೂ ತೆಲುಗು ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ಶ್ರೀಲೀಲಾ, ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆಯುವ ಮುಲಕ ನಿಜ ಜೀವನದಲ್ಲಿಯೂ ನಾಯಕಿಯಾಗಿದ್ದಾರೆ.

ಮಾತೃಶ್ರೀ ಮನೋವಿಕಾಸ ಕೇಂದ್ರದ ಇಬ್ಬರು ದಿವ್ಯಾಂಗ ಮಕ್ಕಳನ್ನು ಶ್ರೀಲೀಲಾ ದತ್ತು ಪಡೆದುಕೊಂಡಿದ್ದಾರೆ. ಎಂಟು ತಿಂಗಳ ಗಂಡು ಮಗು ಗುರು ಹಾಗೂ ಹೆಣ್ಣುಮಗು ಶೋಭಿತಳನ್ನು ದತ್ತು ಪಡೆದಿದ್ದಾರೆ.

ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ಭೇಟಿ ನೀಡಿದ ಶ್ರೀಲೀಲಾ, ಅಲ್ಲಿನ ಮಕ್ಕಳನ್ನು ಕಂಡು ಕೆಲ ಕಾಲ ಭಾವುಕರಾದರು. ಇಬ್ಬರು ಮಕ್ಕಳನ್ನು ದತ್ತು ಪಡೆದು ಇತರರಿಗೆ ಮಾದರಿಯಾದರು.

ಇನ್ನು ಶ್ರೀಲೀಲಾ ಹಾಗೂ ಧನ್ವೀರ್ ಗೌಡ ಅಭಿನಯದ ಬೈ ಟು ಲವ್ ಚಿತ್ರ ಫೆ.18ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರಕ್ಕೂ ಮಕ್ಕಳಿಗೂ ವಿಶೇಷ ನಂಟಿದೆಯಂತೆ. ಇಂದಿನ ಯುವ ಪೀಳಿಗೆಗೆ ಉತ್ತಮ ಸಂದೇಶ ನೀಡುವ ಚಿತ್ರ ಇದಾಗಿದೆ ಎಂದು ಶ್ರೀಲೀಲಾ ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರನ್ನು ಆರ್ಥಿಕ ಸಬಲೀಕರಣಗೊಳಿಸುವುದೆ ನನ್ನ ಗುರಿ; ಸಚಿವೆ ಶಶಿಕಲಾ ಜೊಲ್ಲೆ

Home add -Advt

Related Articles

Back to top button