Latest

ಕಿರುತೆರೆ ಖ್ಯಾತ ನಟಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡದ ಖ್ಯಾತ ನಟಿ, ಕಿರುತೆರೆ ಕಲಾವಿದೆ ಸೌಜನ್ಯಾ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ದೊಡ್ಡಬೆಲೆ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.

ಬೆಂಗಳೂರಿನ ಹೊರವಲಯದ ದೊಡ್ಡಬೆಲೆ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ನಲ್ಲಿ ಸೌಜನ್ಯಾ ತನ್ನ ಬಾಯ್ ಫ್ರೆಂಡ್ ವಿವೇಕ್ ಜೊತೆ ವಾಸವಾಗಿದ್ದರು. ಗೆಳಯನಿಗೆ ತಿಂಡಿ ತರುವಂತೆ ಹೇಳಿ ಹೊರ ಕಳುಹಿಸಿದ್ದ ಸೌಜನ್ಯಾ ಬಳಿಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

Home add -Advt

ಡೆತ್ ನೋಟ್ ನಲ್ಲಿ ತನಗೆ ಹಲವು ಆರೋಗ್ಯ ಸಮಸ್ಯೆಗಳಿದ್ದು, ಯಾರಿಗೂ ಹೇಳಿಕೊಳ್ಳಲಾಗದೇ ಬಳಲುತ್ತಿದ್ದೇನೆ. ನನ್ನ ಮೇಲೆ ಬಹಳ ಜವಾಬ್ದಾರಿಗಳಿವೆ. ಆದರೆ ಆರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಬರೆದಿದ್ದಾರೆ ಎನ್ನಲಾಗಿದೆ.

ಕೊಡಗು ಜಿಲ್ಲೆ ಕುಶಾಲನಗರ ಮೂಲದವರಾದ ಸೌಜನ್ಯಾ ಹಲವು ಧಾರವಾಹಿಗಳಲ್ಲಿ ಅಭಿನಯಿಸಿದ್ದರು. ಕನ್ನಡದ ಚೌಕಟ್ಟು ಹಾಗೂ ಫನ್ ಎಂಬ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ.

ಕುಂಬಳಗೋಡು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಕಲುಷಿತ ನೀರು ಸೇವನೆ; ಇಬ್ಬರು ಮಹಿಳೆಯರು ಸಾವು

Related Articles

Back to top button