Latest
ಕಲುಷಿತ ನೀರು ಸೇವನೆ; ಇಬ್ಬರು ಮಹಿಳೆಯರು ಸಾವು

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಕಲುಷಿತ ನೀರು ಸೇವಿಸಿ ಮಹಿಳೆಯರಿಬ್ಬರು ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ದಸ್ತಾಪುರ ಗ್ರಾಮದಲ್ಲಿ ನಡೆದಿದೆ.
ಕಮಲಾಬಾಯಿ (48) ಹಾಗೂ ದ್ರೌಪದಿ (55) ಮೃತ ಮಹಿಳೆಯರು. ಕಲುಷಿತ ನೀರು ಸೇವನೆಯಿಂದ ಕಳೆದ 15 ದಿನಗಳಿಂದ ಮಕ್ಕಳು ಸೇರಿದಂತೆ 60ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮಸ್ಥರಲ್ಲಿ ವಾಂತಿ-ಬೇಧಿ ಹೆಚ್ಚಾಗುತ್ತಿದೆ.
ಇದೀಗ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಚರಂಡಿ ನೀರು ಸೇರ್ಪಡೆಯಾಗಿ ನೀರು ಕಲುಷಿತಗೊಳ್ಳುತ್ತಿದ್ದು, ಗ್ರಾಮಸ್ಥರ ಜೀವಕ್ಕೇ ಮುಳುವಾಗಿ ಪರಿಣಮಿಸಿದೆ.
ನದಿಗೆ ಉರುಳಿದ ಪ್ರಯಾಣಿಕರ ಬಸ್; 6 ಜನರ ದುರ್ಮರಣ




