*ಗೋಗಟೆ ಕಾಲೇಜಿನಲ್ಲಿ ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಮತ್ತು NCAM ಕಾರ್ಯಾಗಾರ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕೆ. ಎಲ್. ಎಸ್. ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಜಿಐಟಿ) ನವೀಕರಿಸಿದ ಸೆಂಟರ್ ಒಫ್ ಎಕ್ಸಲೆನ್ಸ್ ಇನ್ ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಕೇಂದ್ರವನ್ನು ಉದ್ಘಾಟಿಸಲಾಯಿತು.
ಕೇಂದ್ರವು Zeiss 3D ಸ್ಕ್ಯಾನರ್‌ಗಳು ಮತ್ತು ಅಲ್ಮಾಸಾನಿಕ್ ವೆಲ್ಡಿಂಗ್ ಯಂತ್ರಗಳೊಂದಿಗೆ ವಿವಿಧ ಗಾತ್ರದ ಹಲವಾರು EDM ಪ್ರಿಂಟರ್‌ಗಳನ್ನು ಹೊಂದಿದೆ. ಸೆಂಟರ್ ಆಫ್ ಎಕ್ಸಲೆನ್ಸ್ (COE) ಕೈಗೊಳ್ಳುವ ಚಟುವಟಿಕೆಗಳಲ್ಲಿ MSMEಗಳು ಮತ್ತು ಸಂಸ್ಥೆಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು, ಸಂಶೋಧನಾ ಯೋಜನೆಗಳನ್ನು ಕೈಗೊಳ್ಳುವುದು ಮತ್ತು ಸಲಹೆಯನ್ನು ಒದಗಿಸುವುದು ಸೇರಿವೆ.
ಈ ಕಾರ್ಯಕ್ರಮದ ಸಂದರ್ಭದಲ್ಲಿ, “ರೆವಲ್ಯೂಶನೈಸಿಂಗ್ ಮ್ಯಾನುಫ್ಯಾಕ್ಚರಿಂಗ್ : ದಿ ಸಿನರ್ಜಿ ಆಫ್ ಕಾಂಪೋಸಿಟ್ 3D ಪ್ರಿಂಟಿಂಗ್ ಅಂಡ್ 3D ಸ್ಕ್ಯಾನಿಂಗ್” ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಉದ್ಯಮ ಮತ್ತು ಶೈಕ್ಷಣಿಕ ವಲಯದಿಂದ 100 ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜಿರಾಗಿದ್ದರು. ಕಾರ್ಯಾಗಾರವನ್ನು ಕೆಎಲ್‌ಎಸ್ ಜಿಐಟಿಯು ಎನ್‌ಸಿಎಎಂ (ನ್ಯಾಷನಲ್ ಸೆಂಟರ್ ಫಾರ್ ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್) ಸಹಯೋಗದೊಂದಿಗೆ ಆಯೋಜಿಸಿದೆ.
ಈ ಕಾರ್ಯಾಗಾರವನ್ನು ಫಿಲಿಪ್ಸ್ ಎಡಿಟೀಮ್ಸ್, ಇಂಡಿಯಾದ ಸಹಯೋಗದಿಂದ ಆಯೋಜಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಫಿಲಿಪ್ಸ್ ಎಡಿಟಿವ್ ಉಪಾಧ್ಯಕ್ಷರಾದ ಅನುಜ್ ಬುಧಿರಾಜ ಉಪಸ್ಥಿತರಿದ್ದರು. ಫಿಲಿಪ್ಸ್ ಎಡಿಟಿವ್ ದಲ್ಲಿ ಅವರ ಸಹೋದ್ಯೋಗಿಗಳು ವಿನೋದ್ ಕುಮಾರ್, ಎಜಿಎಂ-ಸೇಲ್ಸ್, ಮಹಾಂತೇಶ್ ಎಲ್. ಹುಕ್ಕೇರಿ, ಆಪ್ಲಿಕೇಶನ್ ಅಭಿಯಂತರರು ಮತ್ತು ಸುಮನ್ ಗೌಡ ಎನ್.ಸಿ, ಅಪ್ಲಿಕೇಶನ್ ಮ್ಯಾನೇಜರ್ ಸಹ ಉದ್ಘಾಟನೆ ಮತ್ತು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು. ಜೀ. ಐ. ಟಿ . ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ ಅಧ್ಯಕ್ಷತೆ ವಹಿಸಿದ್ದರು.
ಕೆಎಲ್‌ಎಸ್ ಜಿಐಟಿಯ ಪ್ರಾಂಶುಪಾಲ ಡಾ.ಎಂ. ಎಸ್. ಪಾಟೀಲ ಸ್ವಾಗತಿಸಿದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಹರ್ಷಿತ್ ಬಿ ಕುಲಕರ್ಣಿ ವಂದಿಸಿದರು. ಎಡಿಟಿವ್ ಮ್ಯಾನುಫ್ಯಾಕ್ಚರಿಂಗ್ ದಲ್ಲಿ CoE ನ ಸಂಚಾಲಕರಾದ ಡಾ ಅರುಣ್ ಕುಮಾರ್ ಪಿ ಮತ್ತು ಡಾ ವಿವೇಕ್ ತಿವಾರಿ ಅವರು CoE ಆಯೋಜಿಸಿದ ಚಟುವಟಿಕೆಗಳ ಕುರಿತು ವರದಿಯನ್ನು ಮಂಡಿಸಿದರು ಮತ್ತು ಸಂಪೂರ್ಣ ಕಾರ್ಯಾಗಾರವನ್ನು ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ