Karnataka News

ಆದರ್ಶ ವಿದ್ಯಾಲಯಗಳ ಪ್ರವೇಶ ಪರೀಕ್ಷೆ ದಿನಾಂಕ ಪ್ರಕಟ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – 2021-22ನೇ ಸಾಲಿನ ಆದರ್ಶ ಶಾಲೆಯ 6ನೇ ತರಗತಿ ದಾಖಲಾತಿಗಾಗಿ ಪ್ರವೇಶ ಪರೀಕ್ಷೆಯನ್ನು ಈ ಹಿಂದೆ ದಿನಾಂಕ:25.04.2021ರಂದು ನಿಗಧಿ ಪಡಿಸಲಾಗಿತತ್ತು. ಆದರೆ ಕೋವಿಡ್-19ರ ಎರಡನೇ ಅಲೆಯು ತೀವ್ರಗತಿಯಲ್ಲಿ ಹೆಚ್ಚುತ್ತಿದ್ದ ಪ್ರಯುಕ್ತ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿತ್ತು.

ಈಗ ಕೋವಿಡ್ 19ರ ಎರಡನೇ ಅಲೆಯು  ಇಳಿಕೆಯಾಗುತ್ತಿರುವುದರಿಂದ ಉಲ್ಲೇಖ-2ರ ಪ್ರಕಾರ ಸಭೆ ನಡೆಸಿ ಪ್ರವೇಶ ಪರೀಕ್ಷೆಯನ್ನು ದಿನಾಂಕ 27.07.2021ರಂದು ನಡೆಸಲು ನಿರ್ಧರಿಸಲಾಗಿದೆ.

ನೂತನ ಎಸ್‌ಒಪಿ ಪ್ರಕಾರ ಉಲ್ಲೇಖ-2ರಲ್ಲಿ ಚರ್ಚಿಸಿದಂತೆ ಪರೀಕ್ಷಾ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ಸಾಫ್ಟ್ ಪ್ರತಿಯನ್ನು ಕೆಎಸ್‌ಕ್ಯೂಎಸಿ ವಿಭಾಗಕ್ಕೆ ಇ-ಮೇಲ್ ಮಾಡಲಾಗಿದೆ. ಉಲ್ಲೇಖ-1ರ 2021-22ನೇ ಸಾಲಿನ ಆದರ್ಶ ವಿದ್ಯಾಲಯಗಳ 6ನೇ ತರಗತಿ ಪ್ರವೇಶ ಪರೀಕ್ಷೆಯನ್ನು ದಿನಾಂಕ 27,07.2021ರಂದು ನಡೆಸಲು ಅನುಮತಿಸಿದೆ.

ಕರ್ನಾಟಕದ ಇಂದಿನ ಕೊರೋನಾ ಮಾಹಿತಿ

Home add -Advt

Related Articles

Back to top button