Latest

*ಏರೋ ಇಂಡಿಯಾ ಏರ್ ಶೋಗೆ ಪ್ರಧಾನಿ ಮೋದಿ ಚಾಲನೆ; ಬಾನಂಗಳದಲ್ಲಿ ಕಣ್ಮನ ಸೆಳೆದ ಲೋಹದ ಹಕ್ಕಿಗಳ ಚಮತ್ಕಾರ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2023ಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಚಾಲನೆ ನೀಡಿದರು.

ಬೆಂಗಳೂರಿನ ಯಲಹಂಕ ಏರ್ ಬೇಸ್ ನಲ್ಲಿ 14ನೇ ಏರೋ ಇಂಡಿಯಾ ಏರ್ ಶೋ ವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಈ ಮೂಲಕ ಇಂದಿನಿಂದ ಫೆ.17ರವರೆಗೆ ರಾಜ್ಯ ರಾಜಧಾನಿ ಬೆಂಗಳೂರಿನ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ ಆರಂಭವಾಗಲಿದೆ.

ಏರೋ ಇಂಡಿಯಾಗೆ ಪ್ರಧಾನಿ ಮೋದಿ ಚಾಲನೆ ನೀಡುತ್ತಿದ್ದಂತೆ, ಸಾರಂಗ್ ಹೆಲಿಕಾಪ್ಟರ್, ಹಾಕ್ ಯುದ್ಧ ವಿಮಾನಗಳು ಹಾರಾಟ ನಡೆಸಿ ಪ್ರಧಾನಿ ಮೋದಿಯವರಿಗೆ ಗೌರವ ವಂದನೆ ಸಲ್ಲಿಸಿದವು.

ಇದರ ಬೆನ್ನಲ್ಲೇ ನೇತ್ರಾ ಯುದ್ಧವಿಮಾನ, ಅರ್ಜುನ ವಿಮಾನಗಳು ಬಾನಂಗದಲ್ಲಿ ಚಿತ್ತಾರ ಮೂಡಿಸಿದವು. ಮಿಗ್-29, ಜಾಗ್ವಾರ್, ಸುಖೋಯ್, ಸೂರ್ಯ ಕಿರಣ್, ಸಾರಂಗ್, ತೇಜಸ್ ಯುದ್ಧ ವಿಮಾನಗಳು, ರುದ್ರ, ಭೀಮ್ ವಿಮಾನಗಳು ಬಾನಂಗಳದಲ್ಲಿ ಚಮತ್ಕಾರದ ಶಕ್ತಿ ಪ್ರದರ್ಶನ ನಡೆಸಿದ್ದು, ಕಣ್ಮನ ಸೆಳೆದವು.

ವಿಮಾನಿಕ ಪ್ರದರ್ಶನದಲ್ಲಿ ಅಮೆರಿಕ ಸೇರಿದಂತೆ ಹಲವು ದೇಶಗಳ ಯುದ್ಧ ವಿಮಾನಗಳು ಪಾಲ್ಗೊಳ್ಳಲಿದ್ದು, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಒಪ್ಪಂದಗಳು ನಡೆಯುವ ಸಾಧ್ಯತೆ ಇದೆ.

ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ,ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬಿಜೆಪಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಬ್ರಾಹ್ಮಣ ಸಮಾಜವೇ ಕಾರಣ – ಅಭಯ ಪಾಟೀಲ

https://pragati.taskdun.com/brahmin-society-is-the-reason-why-bjp-has-grown-to-such-a-large-extent-abhay-patil/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button