ಪ್ರಗತಿವಾಹಿನಿ ಸುದ್ದಿ; ಕಾಬೂಲ್: ತಾಲಿಬಾನಿಗಳ ಅಟ್ಟಹಾಸಕ್ಕೆ ಅಪ್ಘಾನಿಸ್ತಾನ ನರಕಮಯವಾಗಿದ್ದು, ಜನರು ಜೀವಭಯದಲ್ಲಿ ದೇಶ ತೊರೆಯುತ್ತಿದ್ದಾರೆ. ಜನರು ವಿಮಾನದ ಟೈರ್ ಗೆ ಜೋತು ಬಿದ್ದು ಜನರು ಪ್ರಾಣ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ದುರಂತವೊಂದು ಸಂಭವಿಸಿದೆ.
ತಾಲಿಬಾನಿಗಳಿಗೆ ಅಪ್ಘಾನ್ ಅಧ್ಯಕ್ಷ ಅಶ್ರಫ್ ಘನಿ ನಿನ್ನೆಯೇ ಅಧಿಕಾರ ಹಸ್ತಾಂತರ ಮಾಡಿದ್ದು, ಇಂದು ಶಸ್ತ್ರಸಜ್ಜಿತ ಉಗ್ರರು ಅಪ್ಘಾನ್ ಸಂಸತ್ ಭವನನ ವಶಕ್ಕೆ ಪಡೆದಿದ್ದಾರೆ. ದೇಶದಲ್ಲಿ ಕ್ಷಣ ಕ್ಷಣಕ್ಕೂ ಆತಂಕದ ವಾತಾವರಣ ನಿರ್ಮಾಣವಾಗುತ್ತಿದ್ದು ಕಾಬುಲ್ ವಿಮಾನ ನಿಲ್ದಾಣದ ಮೂಲಕ ಜನ ಬೇರೆ ಬೇರೆ ದೇಶಗಳಿಗೆ ತೆರಳುತ್ತಿದ್ದು, ವಿಮಾನ ಹತ್ತಲು ದುಸ್ಸಾಹಸಪಡುತ್ತಿದ್ದಾರೆ.
ಒಂದೆಡೆ ಕಾಬುಲ್ ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲು ಉಂಟಾಗಿದ್ದು, ಇನೊಂದೆಡೆ ಜನರನ್ನು ನಿಯಂತ್ರಿಸಲು ಅಮೆರಿಕನ್ ಸೇನೆ ಏರ್ ಪೋರ್ಟ್ ನಲ್ಲಿ ಫೈರಿಂಗ್ ನಡೆಸಿದೆ. ಏರ್ ಪೋರ್ಟ್ ಕಾಂಪೋಂಡ್ ಹಾರುತ್ತಿರುವ ಜನರು ವಿಮಾನದ ಟೈರ್ ಗಳಿಗೆ ಜೋತು ಬಿದ್ದು ಜೀವ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಆಯತಪ್ಪಿ ಕೆಳಗೆ ಬಿದ್ದು ಇಬ್ಬರು ಸಾವನಪ್ಪಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ