75 ವರ್ಷದ ನಂತರ ಈ ಹಳ್ಳಿಗರಿಗೆ ಸ್ವಾತಂತ್ರ್ಯ ಬಂತು! Thanks to Dr.Sonali Sarnobat
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ, ಅಮೃತಮಹೋತ್ಸವದ ಸಂದರ್ಭದಲ್ಲಿ ಖಾನಾಪುರ ತಾಲೂಕಿನ 23 ಹಳ್ಳಿಗಳ ಜನರು ನಿಜವಾದ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ.
ಖಾನಾಪುರ ತಾಲೂಕಿನ ಈ ಹಳ್ಳಿಗಳ ಜನರು ಈವರೆಗೂ ಪಡಿತರಕ್ಕಾಗಿ ಪರದಾಡುತ್ತಿದ್ದರು. ಎಷ್ಟೋ ದೂರ ಹೋಗಿ ಪಡಿತರ ಪಡೆಯಬೇಕಾದ ಅನಿವಾರ್ಯತೆ ಅವರಿಗಿತ್ತು.ಸುದ್ದಿ ತಿಳಿಯುವ ಹೊತ್ತಿಗೆ ಪಡಿತರ ಖಾಲಿಯಾಗಿರುತ್ತಿತ್ತು. ಪಡಿತರ ಸಿಕ್ಕಿದರೂ ಅದನ್ನು ಸಾಗಿಸಲು ಪರದಾಡಬೇಕಿತ್ತು. ಪಡಿತರ ಅಂಗಡಿಗಳ ಕಿರುಕುಳ ಅನುಭವಿಸಬೇಕಿತ್ತು.
ಈಗ ಇದಕ್ಕೆಲ್ಲ ಮುಕ್ತಿ ಸಿಕ್ಕಿದೆ. ಬಿಜೆಪಿ ಬೆಳಗಾವಿ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ, ಖಾನಾಪುರ ತಾಲೂಕು ಉಸ್ತುವಾರಿ ಡಾ.ಸೋನಾಲಿ ಸರ್ನೋಬತ್ ಪಟ್ಟು ಬಿಡದೆ ಈ ಎಲ್ಲ ಹಳ್ಳಿಗಳ ಜನರಿಗೆ ಹತ್ತಿರದ ಕೇಂದ್ರದಲ್ಲೇ ಪಡಿತರ ವಿತರಣೆಗೆ ಆದೇಶ ಹೊರಡಿಸಿಕೊಂಡು ಬಂದಿದ್ದಾರೆ.
23 ಹಳ್ಳಿಗಳ ಜನರಿಗೆ ಸಮೀಪದ 8 ಕೇಂದ್ರಗಳನ್ನು ಗುರುತಿಸಿ ಪ್ರತಿ ತಿಂಗಳು ಪಡಿತರ ಹಂಚುವ ವ್ಯವಸ್ಥೆ ಮಾಡಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆದೇಶ ಹೊರಡಿಸಿದೆ. ಸೋನಾಲಿ ಸರ್ನೋಬತ್ ಅವರ ಪತ್ರವನ್ನು ಉಲ್ಲೇಖಿಸಿ ಆದೇಶ ಹೊರಡಿಸಲಾಗಿದೆ. ಸಚಿವ ಉಮೇಶ ಕತ್ತಿ ಅವರ ಮೂಲಕ ಪ್ರಯತ್ನ ಮಾಡಿ ಈ ಆದೇಶ ಹೊರಡಿಸುವಲ್ಲಿ ಸೋನಾಲಿ ಸರ್ನೋಬತ್ ಯಶಸ್ವಿಯಾಗಿದ್ದಾರೆ.
ಇಲ್ಲಿಯವರೆಗೂ ಇಲ್ಲಿನ ಜನಪ್ರತಿನಿಧಿಗಳು ಕೇವಲ ಓಟ್ ಬ್ಯಾಂಕ್ ಆಗಿ ಇಲ್ಲಿನ ಜನರನ್ನು ಬಳಸಿಕೊಳ್ಳುತ್ತಿದ್ದರು. ಅವರು ಮೂಲಭೂತ ಸೌಲಭ್ಯ ಒದಗಿಸುವ ಪ್ರಯತ್ನ ನಡೆದೇ ಇಲ್ಲ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.
ಈ ಹಿಂದೆ ಕೂಡ ಅನೇಕ ಹಳ್ಳಿಗಳಿಗೆ ಮನೆ ಬಾಗಿಲಿಗೇ ಪಡಿತರ ಸಿಗುವಂತೆ ಮಾಡುವಲ್ಲಿ ಸೋನಾಲಿ ಸರ್ನೋಬತ್ ಯಶಸ್ವಿಯಾಗಿದ್ದು ಇಲ್ಲಿ ಉಲ್ಲೇಖನೀಯ. ಈ ಕುರಿತ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ –
ಮನೆ ಬಾಗಿಲಿಗೆ ಪಡಿತರ ಯೋಜನೆ ಸಾಕಾರಗೊಳಿಸಿದ ಡಾ.ಸೋನಾಲಿ ಸರ್ನೋಬತ್
ಖಾನಾಪುರ ಕುಗ್ರಾಮಗಳಿಗೆ ಪಡಿತರ ವಿತರಣೆ ಕಲ್ಪಿಸಲು ಯಶಸ್ವಿಯಾದ ಡಾ. ಸೋನಾಲಿ ಸರ್ನೋಬತ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ