Latest

ಚಾಕುವಿನಿಂದ ಪತ್ನಿಯನ್ನೇ ಇರಿದು ಕೊಂದ

ಪ್ರಗತಿವಾಹಿನಿ ಸುದ್ದಿ, ಹಾಸನ: ಪತಿಯೊಬ್ಬ ತನ್ನ ಪತ್ನಿಯನ್ನು ಚಾಕುವಿನಿಂದ ಬರ್ಬರವಾಗಿ ಇರಿದು ಕೊಂದಿದ್ದಾನೆ.

ಅಶ್ವಿನಿ(36) ಕೊಲೆಯಾದವರು. 17 ವರ್ಷದ ಹಿಂದೆ ಜಗದೀಶ್ ಜೊತೆ ಪ್ರೀತಿ ಮಾಡಿ ಮದುವೆಯಾಗಿದ್ದಳು. ಈ ದಂಪತಿಗೆ ಮಗ ಹಾಗೂ ಮಗಳು ಇದ್ದಾರೆ.

Home add -Advt

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಆರೋಪಿ ಜಗದೀಶ ಮತ್ತು ಅಶ್ವಿನಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಆರೋಪಿ ಈ ಹಿಂದೆ ಅಶ್ವಿನಿ ಮೇಲೆ ಹಲ್ಲೆ ಕೂಡ ನಡೆಸಿದ್ದನೆನ್ನಲಾಗಿದೆ.  ಈ ಸಂಬಂಧ ಆಕೆ ಪೊಲೀಸರಿಗೆ ದೂರು ದಾಖಲಿಸಿದ್ದಳು. ಜಗದೀಶ ಮೆಡಿಕಲ್ ಶಾಪ್ ಒಂದನ್ನು ತೆರೆದು ನಷ್ಟ ಅನುಭವಿಸಿ ಮುಚ್ಚಿದ್ದ. ಅಶ್ವಿನಿ ಬೇರೊಂದು ಔಷಧ ಮಳಿಗೆಯಲ್ಲಿ ಕೆಲಸಕ್ಕಿದ್ದರು.

ಈ ವೇಳೆ ಬೇರೊಬ್ಬ ಮಹಿಳೆ ಜೊತೆ ಜಗದೀಶ ಸಂಪರ್ಕ ಬೆಳೆಸಿದ್ದ. ಇದನ್ನು ವಿರೋಧಿಸಿದ್ದಕ್ಕೆ ಹಲವು ಬಾರಿ ಹಲ್ಲೆ ನಡೆಸಿದ್ದ.  ಮಗಳೊಂದಿಗೆ ಪ್ರತ್ಯೇಕವಾಗಿ ವಾಸವಿದ್ದು ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ ಅಶ್ವಿನಿ ಜೀವನಾಂಶ ಕೋರಿದ್ದರು. ಜೀವನಾಂಶ ನೀಡಬೇಕಾಗುವುದೆಂಬ ಕಾರಣಕ್ಕೆ ಪತ್ನಿ ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದ.

ಜೀವನಾಂಶ ಕೇಳಿದ್ದರಿಂದ ರೊಚ್ಚಿಗೆದ್ದಿದ್ದ ಜಗದೀಶ ಬುಧವಾರ ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಬಿಟ್ಟು ಬಂದು ಪತ್ನಿಗೂ  ಮೆಡಿಕಲ್ ಶಾಪ್ ಗೆ ಬಿಟ್ಟು ಬಂದಿದ್ದ.  ಮಧ್ಯಾಹ್ನ  ಆಕೆಯನ್ನು ಊಟಕ್ಕೆಂದು ಮನೆಗೆ ಕರೆತಂದು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಶಾಲೆ ಬಿಟ್ಟು ಮನೆಗೆ ಬಂದ ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ಕಂಡು ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈಶ್ವರಪ್ಪಗೆ ಕ್ಲೀನ್ ಚಿಟ್: ಕಣ್ಣೀರಾದ ಸಂತೋಷ ಪಾಟೀಲ ಪತ್ನಿ (ವಿಡೀಯೋ ಸಹಿತ ಸುದ್ದಿ)

Related Articles

Back to top button