Latest

ಹತ್ರಾಸ್ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ

ಪ್ರಗತಿವಾಹಿನಿ ಸುದ್ದಿ; ಲಕ್ನೌ: ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದ ಹತ್ರಾಸ್ ನ 19 ವರ್ಷದ ಯುವತಿ ಧಾರುಣವಾಗಿ ಸಾವನ್ನಪ್ಪಿದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಮತ್ತೊಂದುಂತದ್ದೇ ಘಟನೆ ನಡೆದಿದೆ. ಗ್ಯಾಂಗ್ ರೇಪ್ ಗೊಳಗಾಗಿದ್ದ ಯುವತಿ ಇದೀಗ ಸಾವನ್ನಪ್ಪಿದ್ದಾಳೆ.

ಉತ್ತರ ಪ್ರದೇಶದ ಬಲರಾಮಪುರದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾಲೇಜು ಪ್ರವೇಶಾತಿಗಾಗಿ ಹೋಗುತ್ತಿದ್ದ 22 ವರ್ಷದ ಯುವತಿ ಮೇಲೆ ನಿನ್ನೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಕೃತ್ಯದ ಬಳಿಕ ಯುವತಿಯನ್ನು ಆಟೋದಲ್ಲಿ ಕರೆತಂದು ಆಕ್ರ್ಯ ಮನೆ ಬಳಿಯೆ ಬಿಸಾಕಿ ಹೋಗಿದ್ದರು.

Home add -Advt

ತೀವ್ರವಾಗಿ ಅಸ್ವಸ್ಥಳಾಗಿದ್ದ ಯುವತಿಯನ್ನು ಲಕ್ನೌ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಯುವತಿ ಸಾವನ್ನಪ್ಪಿದ್ದಾಳೆ.

ಹತ್ರಾಸ್ ಪ್ರಕರಣ ಮಾಸುವ ಮುನ್ನವೇ ಉತರ ಪ್ರದೇಶದಲ್ಲಿ ನಡೆದ ಈ ಘಟನೆ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಯೋಗಿ ಸರ್ಕಾರದ ವಿರುದ್ಧ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಎಸ್ ಪಿ ಸೇರಿದಂತೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹತ್ರಾಸ್ ನಲ್ಲಿ ಕಳೆದ 15 ದಿನಗಳ ಹಿಂದೆ ಹೊಲಕ್ಕೆ ಹೋಗಿದ್ದ ದಲಿತ ಯುವತಿಯನ್ನು ಕಿಡ್ನ್ಯಾಪ್ ಮಾಡಿದ್ದ ಕಾಮುಕರು, ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಯುವತಿ ನಾಲಿಗೆ ಕತ್ತರಿಸಿದ್ದರು. ಆಕೆಯನ್ನು ದೆಹಲಿಯ ಏಮ್ಸ್ ಗೆ ದಾಖಲಿಸಲಾಗಿತ್ತು. ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ಯುವತಿ ಎರಡು ದಿನಗಳ ಹಿಂದೆ ಮೃತಪಟ್ಟಿದ್ದಳು. ಇದೀಗ ಮತ್ತೋರ್ವ ದಲಿತ ಯುವತಿ ಮೇಲೆ ಅತ್ಯಾಚಾರ ನಡೆಸಿರುವುದು ಯೋಗಿ ಸರ್ಕಾರದ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

Related Articles

Back to top button