Latest

ಖಾತೆ ಕ್ಯಾತೆ: ಮೂವರ ಖಾತೆಯಲ್ಲಿ ಮತ್ತೆ ಬದಲಾವಣೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಸಚಿವಸಂಪುಟ ವಿಸ್ತರಣೆ ನಂತರ ಉಂಟಾಗಿರುವ ಖಾತೆ ಕ್ಯಾತೆ ಸರಿಪಡಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಎಂ.ಟಿ.ಬಿ.ನಾಗರಾಜ ಅವರನ್ನು ಖಾತೆ ಬದಲಾವಣೆ ಮೂಲಕ ಸಮಾಧಾನ ಪಡಿಸಿದ್ದ ಯಡಿಯೂರಪ್ಪ ಈಗ ಸಚಿವ ಸುಧಾಕರ್ ಹಾಗೂ ಮಾಧುಸ್ವಾಮಿ ಖಾತೆ ಬದಲಾಯಿಸಿದ್ದಾರೆ. ಇದಕ್ಕಾಗಿ ಆನಂದ ಸಿಂಗ್ ಅವರ ಖಾತೆಯನ್ನು ಬದಲಾಯಿಸಬೇಕಾಯಿತು. ಇದರಿಂದಾಗಿ ಮಾಧುಸ್ವಾಮಿ ಮತ್ತು ಆನಂದ ಸಿಂಗ್ ಇಬ್ಬರೂ ಈಗ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜಿನಾಮೆ ನೀಡಿ ಶಾಸಕರಾಗಿಯೇ ಮುಂದುವರಿಯಲು ಚಿಂತನೆ ನಡೆಸಿದ್ದಾಗಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

Home add -Advt

ಡಾ.ಸುಧಾಕರ ಅವರಿಗೆ ಮತ್ತೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿದೆ. ಮಾಧಿಸ್ವಾಮಿ ಅವರಿಂದ ವೈದ್ಯಕೀಯ ಶಿಕ್ಷಣ ಹಿಂದಕ್ಕೆ ಪಡೆಯಲಾಗಿದ್ದು ಅವರಿಗೆ ಪ್ರವಾಸೋದ್ಯಮ, ಪರಿಸರ ಮತ್ತು ಪರಿಸರ ವಿಜ್ಞಾನ ನೀಡಲಾಗಿದೆ.

ಆನಂದ ಸಿಂಗ್ ಅವರಿಂದ ಪ್ವಾಸೋದ್ಯಮ ಹಿಂದಕ್ಕೆ ಪಡೆದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ ಖಾತೆ ನೀಡಲಾಗಿದೆ.

ಅಸಮಾಧಾನಿತ ಸಚಿವರನ್ನು ಸಮಾಧಾನಪಡಿಸಲು ಆರ್.ಅಶೋಕ ಮತ್ತು ಬಸವರಾಜ ಬೊಮ್ಮಾಯಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

Related Articles

Back to top button