Kannada NewsKarnataka NewsLatest

ಮತ್ತೆರಡು ಗಾಂಜಾ ಪ್ರಕರಣ: ಇನ್ನೂ 6 ಜನರ ಬಂಧನ

ಸಿಸಿಐಬಿ ಮತ್ತು ಸಿಇಎನ್ ಪೊಲೀಸ್‌ರಿಂದ ದಾಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಬೆಳಗಾವಿಯಲ್ಲಿ ಶುಕ್ರವಾರ ಎರಡು ಪ್ರತ್ಯೇಕ ದಾಳಿ ಯಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಲಾಗಿದೆ.
ಬೆಳಗಾವಿ ನಗರ ಸಿಇಎನ್ ವಿಶೇಷ ಠಾಣೆಯ ಪಿಐ  ಯು. ಎಚ್. ಸಾತೇನಹಳ್ಳಿ ಮತ್ತು ಸಿಬ್ಬಂದಿ  ದಾಳಿ ನಡೆಸಿ 5  ಜನರನ್ನು ಬಂಧಿಸಿ, ಒಟ್ಟು33 ಸಾವಿರ ರೂ. ಮೌಲ್ಯದ ಗಾಂಜಾ, ಮೊಬೈಲ್ ಹಾಗೂ ಇತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ನಗರದ ಗ್ಯಾಂಗವಾಡಿ ಧರ್ಮನಾಥ ಭವನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಐದು ಜನರು ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ ಗಾಂಜಾ / ಮಾದಕ ವಸ್ತುವನ್ನು ಇಟ್ಟುಕೊಂಡು   ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯನ್ನಾಧರಿಸಿ ದಾಳಿ ಮಾಡಲಾಯಿತು.

ಮೋದಿನ್ ರಫೀಕ್ ಅತ್ತಾರ  (೩೪ ವರ್ಷ ಸಾ. ೨ ನೇ ಕ್ರಾಸ್ ಸುಭಾಸ ನಗರ ಬೆಳಗಾವಿ), ತಬ್ರೇಜ್ ಇಬ್ರಾಹಿಂ ಅಂಡೇವಾಲೆ (೨೦ ವರ್ಷ ಸಾ. ೭ ನೇ ಕ್ರಾಸ್ ವೀರಭದ್ರ ನಗರ ಬೆಳಗಾವಿ), ಚೇತನ ಮಾರುತಿ ಶಿಂಧೆ (೧೯ ವರ್ಷ ಸಾ. ಕುರುಬರ ಗಲ್ಲಿ ಅನಗೋಳ ಬೆಳಗಾವಿ) ಮಹ್ಮದಯಾಸೀನ ಕುತ್ಬುದ್ದಿನ್ ಅತ್ತಾರ (೨೩ ವರ್ಷ ಸಾ. ೨ ನೇ ಕ್ರಾಸ್ ಸುಭಾಸ ನಗರ ಬೆಳಗಾವಿ), ಮಹ್ಮದಶಾಹೀದ್ ಅತಿಕ್ ಮುಲ್ಲಾ (೧೯ ವರ್ಷ ಸಾ. ೭ ನೇ ಕ್ರಾಸ್ ಇಂಜಿನ ಬಾವಡಿ ಹತ್ತಿರ ವೀರಭದ್ರನಗರ ಬೆಳಗಾವಿ) ಬಂಧಿತರು.

ಅವರ ಬಳಿ ಇದ್ದ ಸುಮಾರು ೩೦ ಸಾವಿರ ರೂ. ಮೌಲ್ಯದ ಒಟ್ಟು ೧ ಕೆಜಿ ೪೮೬.೫ ಗ್ರಾಂ. ಗಾಂಜಾ   ವಿವಿಧ ಕಂಪನಿಯ ೫ ಮೊಬೈಲ ಹ್ಯಾಂಡಸೆಟ್‌ಗಳು ಹೀಗೆ ಒಟ್ಟು  ೩೨,೯೫೦ ರೂ. ಕಿಮ್ಮತ್ತಿನ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಪೊಲೀಸ್ ಇನ್ಸಪೆಕ್ಟರ್ ಸಿಸಿಐಬಿ ಹಾಗೂ ತಂಡ  ದಾಳಿ ಮಾಡಿ, ಓರ್ವನನ್ನು ಬಂಧಿಸಿ, ೫೯೮೦ ರೂ. ಮೌಲ್ಯದ ಗಾಂಜಾ ವಶ ಪಡಿಸಿಕೊಂಡಿದ್ದಾರೆ.
ಬೆಳಗಾವಿ ನಗರದ ಓಲ್ಡ ಬಾಜಿ ಮಾರ್ಕೆಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಗಾಂಜಾ / ಮಾದಕ ವಸ್ತುವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಎಂದು ಬಂದ ಖಚಿತ ಮಾಹಿತಿಯನ್ನಾಧಿರಿಸಿ ಸಿಸಿಐಬಿ ಘಟಕದ ಪೊಲೀಸ್ ನಿರೀಕ್ಷಕ ಸಂಜೀವ ಕಾಂಬಳೆ  ನೇತೃತ್ವದಲ್ಲಿ ಎಎಸ್‌ಐ ಬಿ ಆರ್ ಮುತ್ನಾಳ, ಚೆನ್ನಪ್ಪ ಚೆನ್ನಪ್ಪನವರ, ಬಿಎನ್ ಬಳಗನ್ನವರ,  ಎಸ್. ಆರ್. ಮೇತ್ರಿ,  ನಾಯ್ಕವಾಡಿ,  ಅರುಣ ಕಾಂಬಳೆ,  ಮಹೇಶ ವಡೆಯರ್,  ಎಸ್. ಎಸ್. ಪಾಟೀಲ  ದಾಳಿಯಲ್ಲಿದ್ದರು.

ಅಟೋ ರಿಕ್ಷಾ ಡ್ರೈವರ್‌ ಅನ್ವರ ಹುಸೇನ ತಖಿ ಜವಾದ  ( ೫೭ ವರ್ಷ ಸಾ. ಘೀ ಗಲ್ಲಿ ಬೆಳಗಾವಿ) ಬಂಧಿತ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button