ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ “ಆಗಮನ” ಪ್ರವೇಶ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿ – ಚಿಕ್ಕೋಡಿಯ ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ “ಆಗಮನ” ಪ್ರವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಪ್ರೊ. ಬಸವರಾಜ ಕೊನ್ನೂರ, ಸಂಸ್ಥಾಪಕ ಚೆರಮನ್ನರು, ಕೊನ್ನೂರ ಶಿಕ್ಷಣ ಸಮೂಹ, ಯಲ್ಲಟ್ಟಿ ಮಾತನಾಡಿ –
ಇಂದು ವಿದ್ಯಾರ್ಥಿಗಳು ಬಹು ಆಯಾಮಗಳಲ್ಲಿ ತಮ್ಮ ಜ್ಞಾನ ಮತ್ತು ಕೌಶಲಗಳನ್ನು ಬೆಳೆಸಿಕೊಳ್ಳುವ ಅವಶ್ಯಕತೆ ಇದೆ. ಎಂದಿಗೂ ತಮ್ಮ ಸಮಾಜಕ್ಕೆ, ಶಿಕ್ಷಕರಿಗೆ, ಹಾಗೂ ಪಾಲಕರಿಗೆ ಮೋಸವಾಗದಂತೆ ಕಾಳಜಿ ವಹಿಸಿ ಮುನ್ನಡೆಯಿರಿ ಎಂದರು. ಮನಸ್ಸಿನ ಎಕಾಗ್ರತೆ ಸಾಧಿಸಲೂ ಹಾಗೂ ಸಮಯದ ಸದ್ಬಳಕೆಗೆ ದಿನದ ಎಲ್ಲ ಚಟುವಟಿಕೆಗಳನ್ನು ಮಲಗೂವ ಮುಂಚೆ ಮೇಲುಕು ಹಾಕಿ ನಾಳಿನ ಯೋಜನೆ ಮಾಡಿಕೊಳ್ಳಿ ಎಂದರು. ದೊಡ್ಡ ಕನಸುಗಳನ್ನು ಕಾನಿರಿ, ಹಾಗೂ ಅವುಗಳನ್ನು ಪಡೆದೇ ತಿರುತ್ತೇನೆಂಬ ಆತ್ಮವಿಶ್ವಾಸವಿರಲಿ.
ಒಳ್ಳೆಯ ಹವ್ಯಾಸಗಳನ್ನು ವರ್ತಮಾನದಲ್ಲಿ ಕಾರ್ಯಗತಗೊಳಿಸಿಕೊಂಡರೇ ಮಾತ್ರ ಯಶಸ್ವಿಯಾಗಲೂ ಸಾಧ್ಯ ಎಂದರು. ಅಆಇಈ ಬರದ ಕುಟುಂಬದಲ್ಲಿ ಜನಿಸಿ ಇಂದು 5000 ವಿದ್ಯಾರ್ಥಿಗಳನ್ನು ಹೊಂದಿದ ಶಿಕ್ಷಣ ಸಂಸ್ಥೆ ಕಟ್ಟಲೂ ಸಾಧ್ಯವಾದದ್ದು ಕೇವಲ ಆತ್ಮವಿಶ್ವಾಸದಿಂದ ಮಾತ್ರ. ಹೊಸದಾರಿ ಕಂಡುಕೊಳ್ಳಬೇಕಾದರೇ ಆನೆಯಾಗಬೇಕಾಗಿಲ್ಲ, ಎರೇಹೂಳವಾದರೇ ಸಾಕು. ನಂಬರ್ 1 ಆಗುವ ಮನೋಭಾವ ಬೆಳೆಸಿಕೊಳ್ಳಿ.
ಜೀವನದಲ್ಲಿ ಖುಷಿ ಇರಬೆಕೆಂದರೇ ಕ್ಷಮೆ ಕೇಳುವುದನ್ನು ಹಾಗೇ ಬೇರೆಯವರು ತಪ್ಪು ಮಾಡಿದಾಗ ಕ್ಷಮಿಸುವದನ್ನು ಕರಗತಗೊಳಿಸಬೇಕು.
ನಮ್ಮದು ಒಂದೇ ಜೀವನ ಪ್ರೀತಿಸುವುದಕ್ಕಿರುವುದು, ದ್ವೇಷಿಸುವುದಕ್ಕಲ್ಲ. ಜಗತ್ತು ಎಲ್ಲವನ್ನು ನೀಡಲೂ ತಯಾರಿದೆ, ನಾವು ಅರ್ಹತೆ ಬೆಳೆಸಿಕೊಳ್ಳಬೇಕು. ಮೊದಲಿನ ಕಾಲದಲ್ಲಿ ಮಾಡು ಇಲ್ಲವೇ ಮಡಿ ಎನ್ನುತ್ತಿದ್ದರು, ಆದರೆ ಇಂದು ನಾವು ಸಾಯುವ ಮುಂಚೆ ಮಾಡಿಯೇ ತಿರುತ್ತೆನೆಂಬುದನ್ನು ಹಟವಿರಬೇಕು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಎಸ್ ಸಿ ಮೆಟಗುಡ್ಡ ಮಾತನಾಡಿ –
ಕಾಲಕಾಲಕ್ಕೆ ಪಠ್ಯಕ್ರಮ ಬದಲಾಗದ ಕಾರಣ ಹಾಗೂ ಇಂದಿನ ಯುವಪಿಳಿಗೆಗೆ ಪ್ರಸ್ತುತ ಜ್ಞಾನ ನೀಡಲು ನಮ್ಮ ಕೆ.ಎಲ್.ಇ ಸಂಸ್ಥೆಯು ಆರೋಗ್ಯ ಮತ್ತು ತಾಂತ್ರೀಕ ವಿಶ್ವವಿದ್ಯಾಲಯಗಳನ್ನು ಆರಂಭಿಸಿದೆ. ಈ ಸಂಸ್ಥೆ ಶಿಕ್ಷಕರಿಂದ ಆರಂಭಿಸಲಾಗಿದ್ದು, ಶಿಕ್ಷಕರಿಗೆ ಅತೀ ಹೆಚ್ಚು ಗೌರವವಿದೆ. ಅದೇ ರೀತಿ ಅವರ ಜ್ಞಾನವನ್ನು ಹೆಚ್ಚಿಸಲೂ ಕಾರ್ಯಾಗಾರಗಳ ಮುಖಾಂತರ ತರಬೇತಿ ನೀಡುತ್ತೇವೆ. ನಮ್ಮ ಸಂಸ್ಥೆ ಈ ಮಟ್ಟದಲ್ಲಿ ಬೆಳೆಯಬೇಕಾದರೇ ಇಲ್ಲಿನ ಮುಲಸೌಕರ್ಯಗಳ ಜೊತೆಗೆ ಶಿಕ್ಷಕರ ಶ್ರಮ ಕಾರಣವಾಗಿದೆ.
ಇಂಜೀನಿಯರಿಂಗ್ ವಿದ್ಯಾರ್ಥಿಗಳು ಕೇವಲ ನೌಕರಿಯ ಬೆನ್ನತ್ತದೇ, ತಾವೇ ಉದ್ಯೋಗ ಸೃಷ್ಟಿಸುವಂತಾಗಬೇಕು ಎಂದರು. ಮೊದಲಿನ ಕಾಲದಲ್ಲಿ ಕೇವಲ ಶ್ರೀಮಂತರು ಮಾತ್ರ ಉದ್ಯಮಿಗಳಾಗುತ್ತಿದ್ದರು, ಆದರೇ ಇಂದು ಎಲ್ಲ ವರ್ಗ್‍ದವರು ಸಹಿತ ಎಳ್ಗೆಯಾಗಲೂ ವಿಪುಲವಾದ ಅವಕಾಶಗಳಿವೆ ಎಂದರು. ನಮ್ಮ ದೇಶದಲ್ಲಿ ಸಾಕಷ್ಟು ಮುಲಸೌಕರ್ಯಗಳ ನಿರ್ಮಾಣ ಕೈಗೊಳ್ಳುತ್ತಿರುವುದರಿಂದ ಇಂಜಿನಿಯರಗಳಿಗೆ ಅವಕಾಶಗಳು ನಿರ್ಮಾಣವಾಗುತ್ತಿವೆ ಎಂದರು.
ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪೂರೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ –
ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಿದ್ಧ ಪಡಿಸಿದ ಪ್ರಾಜೆಕ್ಟಗಳು ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿವೆ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ರ್ಯಾಂಕ್ ಗಳಿಸಿರುವುದು ಹಾಗೂ ಆಟೋಟಗಳಲ್ಲಿ ಯುನಿವರ್ಸಿಟಿ ಬ್ಲಿವ್ ಆಗಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು. ಇದರ ಫಲವಾಗಿ ವಿಶ್ವೇಶ್ವರಯಾ ತಾಂತ್ರಿಕ ವಿಶ್ವವಿದ್ಯಾಲಯವು ಉತ್ತರ ಕರ್ನಾಟಕದ ಮಾದರಿ ಇಂಜಿನಿಯರಿಂಗ್ ಕಾಲೇಜು ಪ್ರಶಸ್ತಿ ನೀಡಿದೆ ಎಂದರು. ಇದರ ಶ್ರೇಯ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಸಲ್ಲುತ್ತದೆ, ಎಂದರು.
ಕು. ಪೂಜಶ್ರೀ ಸ್ವಾಗತ ಗೀತೆ ಹಾಡಿದರು. ಕು. ಸ್ವಾತಿ ಕುಲಕರ್ಣಿ ಅಥಿತಿಯನ್ನು ಪರಿಚಯಿಸಿದರು. ಪ್ರೊ. ದರ್ಶನ ಬಿಳ್ಳುರ ಮಹಾವಿದ್ಯಾಲಯದ ಬೆಳವಣೆಗೆಯನ್ನು ಪಿಪಿಟಿ ಮುಖಾಂತರ ವಿವರಿಸಿದರು. ಕು. ಅಪೂರ್ವಾ ಕಲಾಲ ಮತ್ತು ಕು. ಪೂಜಾ ವಾಘಮೋರೆ ನಿರೂಪಿಸಿದರು.
ಡಾ. ಆರ್. ಕೆ. ಪಾಟೀಲ ವಂದಿಸಿದರು. ಕೆ.ಎಲ್.ಇ ಮಾಜಿ ಉಪಾಧ್ಯಕ್ಷರಾದ ಬಸವರಾಜ ತಟವಟಿ, ವಿಭಾಗ ಮುಖ್ಯಸ್ಥರಾದ ಪ್ರೊ. ಸತೀಶ ಭೋಜನ್ನವರ, ಪ್ರೊ. ವಿರಭದ್ರ ಬೂದ್ಯಾಳ, ಪ್ರೊ. ವಿ. ಕೆ. ಪಾಟೀಲ, ಪ್ರೊ. ವಿವೇಕ ಪಾಟೀಲ, ಪ್ರೊ. ಪ್ರೊ. ಸಚೀನ ಮೆಕ್ಕಳಕಿ ಹಾಗೂ ಕಾಲೇಜಿನ ಎಲ್ಲ ಭೋದಕ-ಭೊದಕೇಯತರ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು./////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ