Kannada NewsLatestUncategorized

*ಬೆಳಗಾವಿಯ ಏರ್ಮೆನ್ ತರಬೇತಿ ಶಾಲೆಯಲ್ಲಿ ‘ಅಗ್ನಿವೀರವಾಯು’ ಮೊದಲ ಬ್ಯಾಚ್ ನ ತರಬೇತಿ ಆರಂಭ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಏರ್ಮೆನ್ ತರಬೇತಿ ಶಾಲೆ ಯಲ್ಲಿ (ಎಟಿಎಸ್) ‘ಅಗ್ನಿವೀರವಾಯು’ ಮೊದಲ ಬ್ಯಾಚ್ ನ ತರಬೇತಿಯು ಇಂದಿನಿಂದ ಆರಂಭವಾಗಿದೆ. ಈ ಐತಿಹಾಸಿಕ ದಿನದ ಅಂಗವಾಗಿ, ತರಬೇತಿ ಕಮಾಂಡ್ ನ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಬೆಳಗಾವಿ ಎಟಿಎಸ್ ಗೆ ಭೇಟಿ ನೀಡಿದ್ದರು ಮತ್ತು ಹೊಸದಾಗಿ ಅಗ್ನಿವೀರ ವಾಯು ಬ್ಯಾಚ್ ಗೆ ನೇಮಕಗೊಂಡವರನ್ನು ಉದ್ದೇಶಿಸಿ ಮಾತನಾಡಿದರು.

ಅಗ್ನಿಪಥ ಯೋಜನೆಯ ಪ್ರಮುಖಾಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ಅಗ್ನಿವೀರ ವಾಯುಗಳನ್ನು ಉತ್ತೇಜಿಸಿ ನೀವು ಇಲ್ಲಿಂದೀಚೆಗೆ ಐಎಎಫ್ನಲ್ಲಿ ಅದ್ಭುತ ಪಯಣವನ್ನು ಆರಂಭಿಸುತ್ತಿದ್ದೀರಾ ಎಂದು ಹೇಳಿದರು. 22 ವಾರಗಳ ಕಠಿಣ ತರಬೇತಿಯ ನಂತರ, ಯುವ ಅಗ್ನಿವೀರ ವಾಯುಗಳು ತಾಂತ್ರಿಕ ಪರಿಣತಿ ಮತ್ತು ಯುದ್ಧಕ್ಕೆ ಸನ್ನದ್ಧವಾದ ವಾಯು ಯೋಧರಾಗಿ ರೂಪಾಂತರಗೊಳ್ಳುತ್ತಾರೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಅಗ್ನಿವೀರವಾಯು ದೇಶಾದ್ಯಂತ ವಿವಿಧ ವಲಯ ಕೇಂದ್ರಗಳಿಗೆ ನಿಯೋಜನೆ ಮಾಡಲಾಗುವುದು, ಅದರಲ್ಲಿ ಅವರು ನುರಿತ ಮತ್ತು ಅನುಭವಿ ವಾಯು ಯೋಧರ ನೇರ ಮೇಲ್ವಿಚಾರಣೆಯಲ್ಲಿ ಲಭ್ಯವಿರುವ ಐಎಎಫ್ ಯಂತ್ರೋಪಕರಣ ಮತ್ತು ತಂತ್ರಜ್ಞಾನಕ್ಕೆ ಕ್ರಮೇಣ ಒಗ್ಗಿಕೊಳ್ಳುತ್ತಾರೆ ಎಂದರು. ಭಾರತೀಯ ವಾಯುಪಡೆಯನ್ನು ಜಗತ್ತಿನ ಅತ್ಯಂತ ಬಲಿಷ್ಠ ವಾಯುಪಡೆಗಳಲ್ಲಿ ಒಂದಾಗಿ ಮುಂದುವರಿಸಿಕೊಳ್ಳಲು ವೃತ್ತಿಪರತೆಯಯಲ್ಲಿ ಶ್ರೇಷ್ಠ ಗುಣಮಟ್ಟವನ್ನು ಪ್ರದರ್ಶಿಸಬೇಕು ಎಂದು ಅವರು ಯುವ ಯೋಧರಿಗೆ ಸಲಹೆ ನೀಡಿದರು.

ಎಲ್ಲಾ ವಾಯು ಯೋಧರು ನಡೆಸಿದ ಸಮಗ್ರ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, “ಐತಿಹಾಸಿಕ ಸೇರ್ಪಡೆ ಯೋಜನೆಯನ್ನು ಯಶಸ್ವಿಗೊಳಿಸಲು, ಭಾರತ ಸರ್ಕಾರದಿಂದ ಯೋಜನೆಯನ್ನು ಅಧಿಕೃತವಾಗಿ ಆರಂಭಿಸಿದ ನಂತರ ನೀಲಿ ಬಣ್ಣದ ಧಿರಿಸಿನ ಪುರುಷರು ಮತ್ತು ಮಹಿಳೆಯರು ಶ್ರಮಿಸುತ್ತಿದ್ದಾರೆ. ಈ ಸಮಯದಲ್ಲಿ, ಐಎಎಫ್ ರಾಷ್ಟ್ರದ ಅದಮ್ಯ ವಾಯುಪಡೆಯ ಕಾರ್ಯಾಚರಣೆಯ ಬಲವನ್ನು ವೃದ್ಧಿಸಲು ಅಪಾರ ಸಾಮರ್ಥ್ಯದ ಈ ಅಗ್ನಿವೀರವಾಯುಗಳನ್ನು ಪ್ರಬಲ ಶಸ್ತ್ರಾಗಾರದಲ್ಲಿ ಸೇರಿಸಿಕೊಳ್ಳಲು ಸಿದ್ಧವಿದೆ” ಎಂದು ಹೇಳಿದರು.

ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್,(AOC-in-C) ಹೊಸದಾಗಿ ನೇಮಕಗೊಂಡ ಅಗ್ನಿವೀರವಾಯು ಯೋಧರಿಗೆ ಶಿಸ್ತು, ನೈರ್ಮಲ್ಯ, ದೈಹಿಕ ಮತ್ತು ಮಾನಸಿಕ ಸಹನಾಶಕ್ತಿಯ ಮಹತ್ವವನ್ನು ಒತ್ತಿಹೇಳಿದರು. ತಮ್ಮ ಸಮಾರೋಪ ಭಾಷಣದಲ್ಲಿ, ಅವರು ಐಎಎಫ್ ನ ಭವಿಷ್ಯವನ್ನು ರೂಪಿಸುವಲ್ಲಿ ಬೋಧಕರ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

*ಬೆಳಗಾವಿ: ದೇವಸ್ಥಾನದ ಬಳಿಯೇ ಆತ್ಮಹತ್ಯೆಗೆ ಶರಣಾದ ASI*

https://pragati.taskdun.com/athaniasisuicidebelagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button