ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಅಗ್ನಿಪತ್ ನೇಮಕಾತಿಯಲ್ಲಿ ಕೆಲವೊಂದು ನಿಯಮ ಸಡಿಲಿಕೆ ಮಾಡುವಂತೆ ಕೇಂದ್ರ ರಕ್ಷಣಾ ಸಚಿವರಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾಡಿದ ಮನವಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಂಸಿದ್ದು, ಮಹತ್ವದ ಆದೇಶ ನೀಡಲಾಗಿದೆ.
ಅಗ್ನಿಪತ್ ನೇಮಕಾತಿ ಯೋಜನೆಯಲ್ಲಿ ಕರ್ನಾಟಕದ ಬೀದರ್ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ 70 ಸಾವಿರಕ್ಕಿಂತ ಹೆಚ್ಚು ಯುವಕರು ಸೇನಾ ನೇಮಕಾತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಕೆಲವು ಅಭ್ಯರ್ಥಿಗಳ ವಾಸಸ್ಥಳ ಪ್ರಮಾಣ ಪತ್ರದಲ್ಲಿ ವಿವರಣೆಯಲ್ಲಿ ತಪ್ಪಾಗಿ ಕೆಲವೊಂದು ಅಭ್ಯರ್ಥಿಗಳ ನೇಮಕಾತಿಯಲ್ಲಿ ತಿರಸ್ಕರಿಸಲಾಗುತ್ತಿತ್ತು. ಇದನ್ನು ಮನಗೊಂಡು ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ, ವಾಸಸ್ಥಳದ ಬಗ್ಗೆ ಸಡಿಲಗೊಳಿಸಲು ಕೇಂದ್ರೀಯ ರಕ್ಷಣಾ ಮಂತ್ರಿಗಳಾದ ರಾಜನಾಥ್ ಸಿಂಗ್ ಇವರಿಗೆ ಮನವಿ ಮಾಡಿದ್ದರು.
ಸಂಸದರ ಮನವಿ ಮೇರೆಗೆ ಅಗ್ನಿಪತ್ ನೇಮಕಾತಿ ಯೋಜನೆಯಲ್ಲಿ ಸರ್ಕಾರದಿಂದ ನೀಡಿದ ಬೋನಾಪೈಡ್ ರಹವಾಸಿ ಪ್ರಮಾಣ ಪತ್ರ ಪಡೆದುಕೊಂಡು ಪರಿಗಣಿಸಿ ಇಂಡಿಯನ್ ಆರ್ಮಿ ಫೋರ್ಸ್ ಅಗ್ನಿಪತ್ ಯೋಜನೆಯಡಿಯಲ್ಲಿ ನೇಮಕ ಮಾಡಲು ಆದೇಶ ಮಾಡಿದ್ದಾರೆ.
ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸೇನೆಯಲ್ಲಿ ಸೇರಬಯಸುವ ಯುವಕರು ಇದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ