*ಬೆಲ್ಲ, ಅರಿಶಿನವನ್ನು ಕೇಂದ್ರಿಕರಿಸಿ ಕೃಷಿ ರಫ್ತು ಅರಿವು ಮೂಡಿಸುವ ಕಾರ್ಯಕ್ರಮ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಲ್ಲ ಮತ್ತು ಅರಿಶಿನ ಕೇಂದ್ರಿಕರಿಸಿ ಕೃಷಿ ರಫ್ತು ಮೂಡಿಸುವ ಒಂದು ದಿನದ ಕಾರ್ಯಾಗಾರವನ್ನು ಇಂದು ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.
ಕೆಪೆಕ್ ಸಂಸ್ಥೆಯ ಅಧ್ಯಕ್ಷರಾದ ಬಿ.ಎಚ್. ಹರೀಶ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಬೆಲ್ಲ ಮತ್ತು ಅರಿಶಿನವನ್ನು ಉತ್ಪಾದಿಸಲಾಗುತ್ತಿದೆ. ಇಲ್ಲಿ ಉತ್ಪಾದಿಸಲಾಗುವ ಉತ್ತಮ ಗುಣಮಟ್ಟದ ಬೆಲ್ಲ ಮತ್ತು ಅರಿಶಿನ ರಫ್ತನ್ನು ಉತ್ತೇಜಿಸಲು ಈ ಕಾರ್ಯಾಗಾರ ಆಯೋಜಿಸಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಬಿ.ಎಚ್.ಹರೀಶ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ FIEO ರಫ್ತು, ಸೇವೆಗಳು ಮತ್ತು ಭಾರತೀಯ ವ್ಯಾಪಾರ ಪೋರ್ಟಲ್‌ಗೆ ಪರಿಚಯ, ವಿದೇಶಿ ವ್ಯಾಪಾರ ನೀತಿ 2023 ಮತ್ತು ಅದರ ಪ್ರೋತ್ಸಾಹ, ಕರ್ನಾಟಕದಿಂದ ಅರಿಶಿನ ರಫ್ತು ಸಾಮರ್ಥ್ಯ, ಬೆಲ್ಲದ ಮೇಲೆ ಕೇಂದ್ರೀಕರಿಸಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಕ್ಷೇತ್ರಗಳಿಗೆ APEDA ಸೇವೆಗಳು, ಬೆಲ್ಲ ಮತ್ತು ಅರಿಶಿನ ರಫ್ತು ಮಾಡುವಲ್ಲಿ PQL ಪಾತ್ರ, ರಫ್ತು ಕ್ರೆಡಿಟ್ ರಿಸ್ಕ್ ಮ್ಯಾನೇಜೈಂಟ್, ಕೃಷಿ ಮತ್ತು ಸಂಸ್ಕರಿಸಿದ ಆಹಾರ ರಫ್ತುದಾರರಿಗೆ ರಫ್ತು ಹಣಕಾಸು, ಇನ್ ಕೋಟರ್ಮ್ ಗಳು, ಪಾವತಿ ವಿಧಾನ, ಕರ್ನಾಟಕ ಸರ್ಕಾರದ ಕೈಗಾರಿಕಾ
ನೀತಿ 2020 -2025, KAPPEC ನ ಯೋಜನೆಗಳು ಮತ್ತು ಚಟುವಟಿಕೆಗಳು ಮುಂತಾದ ವಿಷಯಗಳ ಬಗ್ಗೆ ವಿಷಯ ತಜ್ಞರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೆಪೆಕ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಮ್.ಎಚ್ ಬಂಥನಾಳ, ಕೃಷಿ ಇಲಾಖೆಯ ಜಂಟಿ ನಿರ್ದೆಶಕರು ಶಿವನಗೌಡ ಎಸ್. ಪಾಟೀಲ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಸತ್ಯನಾರಾಯಣ ಭಟ್, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಂಸ್ಥೆ ನಿರ್ದೇಶನಾಲಯ ಆಯುಕ್ತರು ಚೇತನಾ ಪಾಟೀಲ, FIEO ಉಪ ನಿರ್ದೇಶಕ ಡ್ಯಾನಿಷಾ ಮಿನು, ಉಪ ಕೃಷಿ ನಿರ್ದೇಶಕರುಗಳಾದ ಎಸ್.ಬಿ.ಕೊಂಗವಾಡ, ಎಚ್.ಡಿ. ಕೋಳಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸುಮಾರು 200 ರೈತ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳ, ಪ್ರಗತಿ ಪರ ರೈತರು, ಆಹಾರ ಸಂಸ್ಕರಣಾ ಉದ್ದಿಮೆದಾರರು, ನವೋದ್ಯಮಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ