
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಕೃಷಿ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳಾದ ಕೆ.ಹೆಚ್ ಗುರುಪ್ರಸಾದ ರವರ ಸಮ್ಮುಖದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಜಂಟಿ ನಿರ್ದೇಶಕರಾದ ಎಸ್ ಆರ್ ಮಾಳಿ ಮತ್ತು ಇಲಾಖೆಯ ಅಧಿಕಾರಿಗಳು ಹಾಗೂ ಮಾರುಕಟ್ಟೆ ಸಮಿತಿ ಸಿಬ್ಬಂದಿಗಳು ತೂಕದ ಸತ್ಯಾಪನೆ ಕಾರ್ಯಾಚರಣೆಯನ್ನು (ತೂಕದ ಯಂತ್ರಗಳ ತಪಾಸಣೆ) ಕೈಗೊಂಡರು.
ಪ್ರಾಂಗಣದಲ್ಲಿನ ದಲಾಲಿಗಳ ಅಂಗಡಿಗಳಲ್ಲಿ ತೂಕದ ಯಂತ್ರಗಳ ತಪಾಸಣೆ ಕೈಗೊಂಡು, ಸತ್ಯಾಪನೆ ಕೈಗೊಳ್ಳದ ಯಂತ್ರಗಳ ಸತ್ಯಾಪನೆಯನ್ನು ನಿಯಮಾನುಸಾರ ಕೈಗೊಂಡು, ತೂಕದ ಯಂತ್ರಗಳ ನಿರ್ವಹಣೆ ಮತ್ತು ಸತ್ಯಾಪನೆ ಕೈಗೊಳ್ಳುವ ಬಗ್ಗೆ ಹಾಗೂ ಇದಕ್ಕೆ ತಪ್ಪಿದಲ್ಲಿ ಕಾನೂನಿನ ಅಡಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.