Kannada NewsKarnataka NewsLatest

ಸಾವಯವ ಕೃಷಿಯಲ್ಲಿ ಸ್ವಾವಲಂಬಿ ಬದುಕು -ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ

ಪ್ರಗತಿವಾಹಿನಿ ಸುದ್ದಿ,  ಯರಗಟ್ಟಿ:
ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸಲು ಶೂನ್ಯ ಬಂಡವಾಳದ ಸಾವಯವ ಕೃಷಿಯಲ್ಲಿ ಸಾವಯವ ಕೃಷಿಯನ್ನು ಪ್ರಾರಂಭಿಸಿ ಸ್ವಾವಲಂಬಿಗಳಾಗಿ ಬದುಕಿರಿ ಎಂದು ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ಹೇಳಿದರು.

ಅವರು ಸಮೀಪದ ಕಡಬಿ ಗ್ರಾಮದ ಸಾವಯವ ಕೃಷಿಕ ಸಂತೋಷ ಕಿತ್ತೂರ ಅವರ ಹೋಲದಲ್ಲಿ ನಡೆದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಕುರಿತು ರೈತರೊಂದಿಗೆ ಸಂವಾದ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.

ರೈತರಿಗೆ ಇಂದಿನ ಕೃಷಿಯಲ್ಲಿ ಖರ್ಚು ಹೆಚ್ಚಾಗುತಿದ್ದು, ಆದಾಯ ಕಡಿಮೆಯಾಗುತ್ತಿದೆ. ಆಹಾರದ ಕೊರತೆ ನೀಗಿಸಲು ಸರಕಾರ ಕೈಗೊಂಡ ಹಸಿರು ಕ್ರಾಂತಿ ಕ್ರಮದಿಂದ ಕೃಷಿ ಉತ್ಪನ್ನ ಹೆಚ್ಚಾಗಿದ್ದರೂ, ಅದೇ ರೀತಿ ಭೂಮಿ ವಿಷಮಯವಾಗಿದೆ. ರಾಸಾಯನಿಕ, ಕೀಟನಾಶಕ ಬಳಕೆ ಹೆಚ್ಚಿದ್ದರ ಪರಿಣಾಮ ಇದೀಗ ರೈತರಿಗೆ ಕೃಷಿ ಲಾಭದಾಯಕವಾಗಿಲ್ಲ. ಸರಕಾರ ರೈತರಿಗೆ ಲಾಭದಾಯಕವಾಗುವಂತಹ ಯೋಜನೆ ರೂಪಿಸಲು ಶೂನ್ಯ ಬಂಡವಾಳ ಕೃಷಿಯನ್ನು ಪರಿಚಯಿಸುತ್ತಿದೆ ಎಂದರು.

ಕಾರ್ಯಕ್ರಮಕ್ಕೆ ಮೋದಲು ಸಾವಯವ ಕೃಷಿಕ ಸಂತೋಷ ಕಿತ್ತೂರ ಅವರ ಹೋಲದಲ್ಲಿ ಪರೀಶಿಲನೆ ಮಾಡುತ್ತಾ ಬಹುಬೆಳೆ, ಸಾವಯವ ಕೃಷಿ, ಅವರು ಮಾಡಿದ ಪ್ರಯತ್ನಗಳ ಕುರಿತು ಚರ್ಚಿಸಿದರು. ನಂತರ ಬೆಳೆಯನ್ನು ವಿಕ್ಷಣೆ ಮಾಡಿ ಹರ್ಷ ವ್ಯಕ್ತಪಡಿಸಿದರು.
ಕೃಷಿಯ ಜತೆಗೆ ಸಾವಯವ ಬೆಲ್ಲ ಹಾಗೂ ಇನ್ನಿತರ ಉದ್ದೇಮೆಗಳ ಕುರಿತು ಸಹ ಚರ್ಚೆ ಮಾಡುತ್ತಾ ಅವುಗಳ ಮಾರುಕಟ್ಟೆ ಕುರಿತು ಚರ್ಚಿಸಿದರು.

ಕಡಬಿಯ ಸಾವಯವ ಕೃಷಿಕ ಸಂತೋಷ ಕಿತ್ತೂರ ಮಾತನಾಡುತ್ತಾ ಸುಮಾರು ಎಂಟು ವರ್ಷಗಳ ಫಲ ಈಗ ಕೊಡುತ್ತಿದೆ. ರೈತರು ಸಾವಯವ ಕೃಷಿಯಲ್ಲಿ ಲಾಭವನ್ನು ಪಡೆಯಬಹುದು ಎಂದರು.

ನಂತರ ರೈತರ ಜತೆ ಸಂವಾದ ಕಾರ್ಯಕ್ರಮದಲ್ಲಿ ರೈತರು ಬೇಳೆಗೆ ವೈಜ್ಞಾನಿಕ ಬೆಲೆ ಹಾಗೂ ಇನ್ನಿತರ ವಿಷಯಗಳ ಕುರಿತು ತಮ್ಮ ಅಳಲನ್ನು ತೊಡಿಕೊಂಡರು. ವಿವಿಧ ರೈತ ಸಂಘಟನೆಗಳ ಮೂಲಕ ಸಚಿವರಿಗೆ ಸನ್ಮಾನ ಮಾಡಿ ಮನವಿ ಪತ್ರಗಳನ್ನು ಕೊಟ್ಟರು.

ಕೃಷಿಕ ಸಮಾಜದ ಉಪಾದ್ಯಕ್ಷ ಎಫ್.ಎಸ್.ದೊಡಗೌಡ್ರ, ಜಂಟಿ ಕೃಷಿ ನಿರ್ದೆಶಕ ವಿ.ಜಿ.ಪಾಟೀಲ, ಜಂಟಿ ಕೃಷಿ ನಿರ್ದೆಶಕ ಜೆ.ಎಚ್.ಮೋಕಾಶಿ, ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿ ಸಿ.ಪಿ.ಚಂದ್ರಶೇಖರ, ಸಲೀಂ ಸಂಗತ್ರಾಸ್, ಕೃಷಿ ಪರಿಕರ ವ್ಯಾಪಾರಸ್ಥ ಉಮೇಶ ಬಾಳಿ, ಪ್ರಗತಿಪರ ರೈತ ನಾಗರಾಜ ದೇಸಾಯಿ, ಹಾಲು ಉತ್ಪಾದಕರ ಸಂಘದ ನಿರ್ದೆಶಕ ಎಸ್.ಎಸ್.ಮುಗಳಿ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಹಮ್ಮಣ್ಣವರ, ತಾಪಂ ಸದಸ್ಯೆ ನಿಂಗಮ್ಮ ನಡುವಿನ, ಸವದತ್ತಿಯ ಸಹಾಯಕ ಕೃಷಿ ನಿರ್ದೆಶಕ ಕೆ.ಎನ್. ಮಾರಡ್ಡಿ, ರೈತ ಮುಖಂಡ ಮಹಾಂತೇಶ ತೋಟಗಿ ಇನ್ನಿತರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button