
ಪ್ರಗತಿವಾಹಿನಿ ಸುದ್ದಿ: ಅಹಮದಾಬಾದ್ ನಲ್ಲಿ ಲಂಡನ್ ಗೆ ಪ್ರಯಾಣಿಸುತ್ತಿದ್ದ ವಿಮಾನವೊಂದು ಪತನಗೊಂಡಿದ್ದು, ವಿಮಾನ ನೆಲಕ್ಕಪ್ಪಳಿಸಿ ಬೆಂಕಿಯಲ್ಲಿ ಹೊತ್ತಿ ಉರಿದಿದೆ.
ಗುಜರಾತ್ ನ ಅಹಮದಾಬಾದ್ ಏರ್ ಪೋರ್ಟ್ ನಿಂದ 240ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತಿದ್ದ ವಿಮಾನ ಟೇಕ್ ಆಫ್ ಆದ 5 ನಿಮಿಷಗಳಲ್ಲೇ ಮರಕ್ಕೆ ಡಿಕ್ಕಿ ಹೊಡೆದು, ಕಟ್ಟಡಕ್ಕೆ ಗುದ್ದಿ ನೆಲಕ್ಕಳಿಸಿದೆ. ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡಿದೆ ಎಂದು ತಿಳಿದುಬಂದಿದೆ.
ನೆಲಕ್ಕಪ್ಪಳಿಸಿದ ವಿಮಾನ ಧಗ ಧಗನೆ ಹೊತ್ತಿ ಉರಿದಿದೆ. ವಿಮಾನದಲ್ಲಿದ್ದ ಪ್ರಯಾಣಿಕರು, ಸಿಬ್ಬಂದಿಗಳ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಈ ನಡುವೆ ಇದೇ ವಿಮಾನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಪ್ರಯಾಣಿಸುತ್ತಿದ್ದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.