LatestNational

*240 ಕ್ಕೂಹೆಚ್ಚು ಪ್ರಯಾಣಿಕರು ಇದ್ದ ವಿಮಾನ ಪತನ: ಏರ್ ಪೋರ್ಟ್ ಬಳಿಯೇ ಹೊತ್ತಿ ಉರಿದ ಫ್ಲೈಟ್*

https://x.com/hirparadivyesh/status/1933081082381144435?ref_src=twsrc%5Etfw%7Ctwcamp%5Etweetembed%7Ctwterm%5E1933081082381144435%7Ctwgr%5E90f3e647795214aef4d08110ac62c5e38b9f2154%7Ctwcon%5Es1_&ref_url=https%3A%2F%2Fwww.freepressjournal.in%2Findia%2Fbreaking-news-passenger-plane-crashes-near-gujarats-ahmedabad-airport

ಪ್ರಗತಿವಾಹಿನಿ ಸುದ್ದಿ: 240 ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನವೊಂದು ಅಹಮದಾಬಾದ್ ನ ಏರ್ ಪೋರ್ಟ್ ಬಳಿಯೇ ಪತನಗೊಂಡಿರುವ ಘಟನೆ ನಡೆದಿದೆ.

Home add -Advt

ಗುಜರಾತ್ ನ ಅಹಮದಾಬಾದ್ ನ ಏರ್ ಪೋರ್ಟ್ ಬಳಿಯೇ ಈ ದುರಂತ ಸಂಭವಿಸಿದೆ. ಅಹಮದಾಬಾದ್ ನಿಂದ ಲಂಡನ್ ಗೆ ಹೊರಟಿದ್ದ ಅಂತರಾಷ್ಟ್ರೀಯ ಬೋಯಿಂಗ್ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ನೆಲಕ್ಕೆ ಅಪ್ಪಳಿಸಿದ್ದು, ಧಗಧಗನೆ ಹೊತ್ತಿ ಉರಿದಿದೆ.

ಮೂಲಗಳ ಪ್ರಕಾರ ವಿಮಾನದಲ್ಲಿ 242 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಘಟನಾ ಸ್ಥಳಕ್ಕೆ ರಕ್ಷಣಾ ತಂಡ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಟೇಕ್ ಆಫ್ ಆದ ಕೆಲ ಕ್ಷಣಗಳಲ್ಲೇ ಮರಕ್ಕೆ ಡಿಕ್ಕಿ ಹೊಡೆದ ವಿಮಾನ ನೆಲಕ್ಕೆ ಅಪ್ಪಳಿಸಿದೆ. ಕ್ಷಣಾರ್ಧದಲ್ಲಿ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹೊತ್ತಿ ಉರಿಯಲಾರಂಭಿಸಿದೆ. ಪ್ರಯಾಣಿಕರ ಸ್ಥಿತಿಗತಿ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. ಹಲವು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.


Related Articles

Back to top button