ಪ್ರಗತಿವಾಹಿನಿ ಸುದ್ದಿ; ಅಹ್ಮದಾಬಾದ್: ಜೀವನದಲ್ಲಿ ಜಿಗುಪ್ಸೆಗೊಂಡು ಅಥವಾ ನೋವಿನಿಂದ ಬಹಷ್ಟು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೋರ್ವ ಮಹಿಳೆ ನಗುನಗುತ್ತಲೇ, ಶಾಂತಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆದಿದೆ.
ಶಬರಮತಿ ನದಿಗೆ ಜಿಗಿದು ಆಯೇಷಾ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿರುವ ಮಹಿಳೆ ನಾನು ಒತ್ತಡದಿಂದಾಗಿ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ, ಅಲ್ಲಾನೆಡೆಗೆ ತೆರಳಲು ಸಂತೋಷದಿಂದ ಸಾವಿಗೆ ಶರಣಾಗುತ್ತಿದ್ದೇನೆ ಎಂದಿದ್ದಾಳೆ.
ನನಗೆ ಕುಟುಂಬದ ಒತ್ತಡವಾಗಲಿ, ತೊಂದರೆಯಾಗಲಿ ಇಲ್ಲ. ಅಲ್ಲಾ ನೀಡಿದ ಜೀವನವು ದೀರ್ಘಾವಧಿಯದ್ದು, ಈ ಸಣ್ಣ ಜೀವನವನ್ನು ನಾನು ತುಂಬಾ ಶಾಂತಿಯುತವಾಗಿ ಕಳೆದಿದ್ದೇನೆ. ಅಪ್ಪಾ ನೀವು ಎಲ್ಲಿಯವರೆಗೆ ಹೋರಾಡುತ್ತೀರಿ ಪ್ರಕರಣ ಹಿಂಪಡೆಯಿರಿ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ. ಬಳಿಕ ನಗುತ್ತಲೇ ಶಬರಮತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಅಷ್ಟರಲ್ಲಿ ಮಹಿಳೆ ಸಾವನ್ನಪ್ಪಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ