Latest

ಪೆನ್ ಹಾಗೂ ಎಮರ್ಜನ್ಸಿ ಲೈಟ್ ನಲ್ಲಿ ಚಿನ್ನ ಸಾಗಾಟ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಪೆನ್ ಹಾಗೂ ಎಮರ್ಜನ್ಸಿ ಲೈಟಿನ ಬ್ಯಾಟರಿಯಲ್ಲಿ ಚಿನ್ನವನ್ನು ಅಡಗಿಸಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತರನ್ನು ಕಾಸರಗೋಡಿನ ಅಬ್ದುಲ್ ರಶೀದ್ ಹಾಗೂ ಅಬ್ದುಲ್ ನಿಸಾದ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ದುಬೈನಿಂದ ಮಂಗಳೂರಿಗೆ ಬಂದಿದ್ದರು.

Home add -Advt

ಆರೋಪಿ ಅಬ್ದುಲ್ ರಶೀದ್ ಪೌಡರ್ ರೂಪದ ಚಿನ್ನವನ್ನು ಮೂರು ಉಂಡೆಗಳಾಗಿಸಿ ತಂದಿದ್ದ. ಅಬ್ದುಲ್ ನಿಸಾದ್ ಪೆನ್ ಮತ್ತು ಎಮರ್ಜೆನ್ಸಿ ಲೈಟಿನ ಬ್ಯಾಟರಿಯಲ್ಲಿ ಚಿನ್ನವನ್ನು ಅಡಗಿಸಿಟ್ಟಿದ್ದ. ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಇಬ್ಬರೂ ಸಿಕ್ಕಿಬಿದ್ದಿದ್ದು, 1 ಕೆ.ಜಿ ಚಿನ್ನ ವಶಕ್ಕೆ ಪಡೆದಿದ್ದಾರೆ.

Related Articles

Back to top button