Karnataka NewsLatestTech

*ಬೆಂಗಳೂರಿನಲ್ಲಿ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’*

ಎಐ (AI) ಆಧಾರಿತ ಜಲ ಆಡಳಿತಕ್ಕೆ ಕರ್ನಾಟಕದ ಒತ್ತು: ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್

ಪ್ರಗತಿವಾಹಿನಿ ಸುದ್ದಿ: ಮೇ 27: ಹವಾಮಾನ ಬದಲಾವಣೆ, ನಗರೀಕರಣ, ಅಂತರ್ಜಲ ಕುಸಿತ ಹಾಗೂ ಮೂಲಸೌಕರ್ಯಗಳ ಮೇಲಿನ ಒತ್ತಡದಂತಹ ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ತಂತ್ರಜ್ಞಾನಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಎಐ ಆಧಾರಿತ ನಗರ ಜಲ ಆಡಳಿತದಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದರು.

ಇಂದು ಬೆಂಗಳೂರಿನಲ್ಲಿ ಎಲೆಟ್ಸ್ (elets) ಮತ್ತು ಕೆಪಿಎಂಜಿ (KPMG) ಸಹಯೋಗದೊಂದಿಗೆ ಬೆಂಗಳೂರು ಜಲಮಂಡಳಿ (BWSSB) ಆಯೋಜಿಸಿದ್ದ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ನ್ನು ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ ಮತ್ತು ಬೆಳಗಾವಿಯಂತಹ ನಗರಗಳ ಮೇಲೆ ನೀರಿನ ಒತ್ತಡ ಹೆಚ್ಚಾಗುತ್ತಿದೆ. ದಕ್ಷ, ಪಾರದರ್ಶಕ ಮತ್ತು ಜವಾಬ್ದಾರಿಯುತ ಸಾರ್ವಜನಿಕ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನ ಆಧಾರಿತ ಇಂಟಲಿಜೆಂಟ್ ಆಡಳಿತ ವ್ಯವಸ್ಥೆಗಳು ಅತ್ಯಗತ್ಯವಾಗಿವೆ ಎಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ತಿಳಿಸಿದರು.

Home add -Advt

“ನಗರದ ನೀರು ಸರಬರಾಜು ಮಂಡಳಿಗಳಿಗೆ ಎಐ ಮತ್ತು ಡಿಜಿಟಲ್ ಇಂಟೆಲಿಜೆನ್ಸ್ ಇನ್ನು ಮುಂದೆ ಕೇವಲ ಐಚ್ಛಿಕ ಸಾಧನಗಳಾಗಿ ಉಳಿದಿಲ್ಲ. ನೈಜ-ಸಮಯದ ಮೇಲ್ವಿಚಾರಣೆ, ಪ್ರಿಡಿಕ್ಟಿವ್‌ ಅನಾಲಿಟಿಕ್ಸ್‌ , ನೀರಿನ ಬೇಡಿಕೆಯ ಮುನ್ಸೂಚನೆ ಹಾಗೂ ದತ್ತಾಂಶ ಆಧಾರಿತ ಆಡಳಿತವು ಭವಿಷ್ಯದ ಜಲ ನಿರ್ವಹಣೆಯನ್ನು ನಿರ್ಧರಿಸಲಿವೆ,” ಎಂದು ಹೇಳಿದರು.

ಕರ್ನಾಟಕವು ಈಗಾಗಲೇ ಎಐ ಉತ್ಕೃಷ್ಟತಾ ಕೇಂದ್ರಗಳನ್ನು (AI Centres of Excellence) ಸ್ಥಾಪಿಸಿದೆ ಹಾಗೂ ಡಿಜಿಟಲ್ ಸಂಗ್ರಹಣೆ, ಡೇಟಾ ಹಂಚಿಕೆ ಮತ್ತು ಕಾರ್ಯಕ್ಷಮತೆ-ಆಧಾರಿತ ಆಡಳಿತ ವ್ಯವಸ್ಥೆಗಳನ್ನು ಬೆಂಬಲಿಸುವ ನೀತಿ ಚೌಕಟ್ಟುಗಳನ್ನು ಪರಿಚಯಿಸಿದೆ ಎಂದು ಅವರು ಉಲ್ಲೇಖಿಸಿದರು. ಡಿಜಿಟಲ್ ರೂಪಾಂತರದ ಕೇಂದ್ರಬಿಂದುವಾಗಿ ಹೊಣೆಗಾರಿಕೆಗೂ ಆದ್ಯತೆ ನೀಡಬೇಕು ಮುಖ್ಯ ಕಾರ್ಯದರ್ಶಿಗಳು ಕರೆ ನೀಡಿದರು.

“ದತ್ತಾಂಶವು ಅಂತಿಮವಾಗಿ ಅಳೆಯಬಹುದಾದ ಆಡಳಿತಾತ್ಮಕ ಫಲಿತಾಂಶಗಳಿಗೆ ಕಾರಣವಾಗಬೇಕು. ತಂತ್ರಜ್ಞಾನವು ಸಾರ್ವಜನಿಕರ ವಿಶ್ವಾಸ ಮತ್ತು ಸಾಂಸ್ಥಿಕ ದಕ್ಷತೆಯನ್ನು ಬಲಪಡಿಸಬೇಕು,” ಎಂದು ತಿಳಿಸಿದರು.

ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಬೆಂಗಳೂರಿನ ವಿಸ್ತಾರ ಮತ್ತು ಸಂಕೀರ್ಣತೆಯು ಸಾಂಪ್ರದಾಯಿಕ ನಿರ್ವಹಣಾ ಕಾರ್ಯಾಚರಣೆಗಳಿಂದ ಮುನ್ಸೂಚಕ ಮತ್ತು ಬುದ್ಧಿವಂತ ನಿರ್ವಹಣಾ ವ್ಯವಸ್ಥೆಗಳತ್ತ ಬದಲಾಗುತ್ತಿದೆ.
“ಬೆಂಗಳೂರು ಜಲಮಂಡಳಿಯು ಇಂದು 14 ದಶಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ಸೇವೆ ಸಲ್ಲಿಸುತ್ತಿದೆ. ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾದ ಬೆಂಗಳೂರಿನ ನೀರಿನ ನಿರ್ವಹಣೆಗೆ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಆಧಾರಿತ ಆಡಳಿತದ ಅಗತ್ಯವಿದೆ. ಡಿಜಿಟಲ್ ರೂಪಾಂತರದ ಭಾಗವಾಗಿ ಜಲಮಂಡಳಿಯು ಈಗಾಗಲೇ ಏಷ್ಯಾದ ಅತಿದೊಡ್ಡ ನಗರ-ಮಟ್ಟದ ಸ್ಕಾಡಾ (SCADA) ವ್ಯವಸ್ಥೆ, ಜಿಐಎಸ್ (GIS) ಆಧಾರಿತ ಮ್ಯಾಪಿಂಗ್, ಐಒಟಿ (IoT) ಮೇಲ್ವಿಚಾರಣೆ, ಸ್ವಯಂಚಾಲಿತ ಸೋರಿಕೆ ಪತ್ತೆ ವ್ಯವಸ್ಥೆಗಳು ಮತ್ತು ಸ್ಮಾರ್ಟ್ ಮೀಟರಿಂಗ್ ಪ್ರಾಯೋಗಿಕ ಯೋಜನೆಗಳನ್ನು ಅಳವಡಿಸಿಕೊಂಡಿದೆ. ಜಲಮಂಡಳಿಯು ಇಂತಹ ತಂತ್ರಜ್ಞಾನಗಳ ನೆರವಿನಿಂದ ನಾನ್ ರೆವಿನ್ಯೂ ವಾಟರ್ (Non-Revenue Water – NRW) ಪ್ರಮಾಣವನ್ನು ಶೇ. 50 ರಿಂದ ಶೇ. 26.5 ಕ್ಕೆ ಇಳಿಸಿದೆ, ಇದರ ಪರಿಣಾಮವಾಗಿ ಪ್ರತಿದಿನ ಸುಮಾರು 200 ದಶಲಕ್ಷ ಲೀಟರ್ (200 MLD) ನೀರು ಉಳಿತಾಯವಾಗುತ್ತಿದೆ” ಎಂದು ಹೇಳಿದರು.

ಜಲಮಂಡಳಿಯ ಎಐ-ಚಾಲಿತ ಎನರ್ಜಿ ಆಪ್ಟಿಮೈಸೆಷನ್ ಪಂಪ್ ಗಳಿಂದ (Energy optimisation) ವಾರ್ಷಿಕವಾಗಿ ಪೋಲಾಗುತ್ತಿದ್ದ ಸುಮಾರು ₹42 ಕೋಟಿ ಮೌಲ್ಯದ ವಿದ್ಯುತ್ ವೆಚ್ಚವನ್ನು ಉಳಿತಾಯ ಮಾಡಲು ನೆರವಾಗಿವೆ. ಎಐ ಎಂದರೆ ಕೇವಲ ಡ್ಯಾಶ್‌ಬೋರ್ಡ್‌ಗಳಲ್ಲ. ಇದು ಮುನ್ಸೂಚಕ ಆಡಳಿತ, ಹೊಣೆಗಾರಿಕೆ ಮತ್ತು ಅಳೆಯಬಹುದಾದ ಫಲಿತಾಂಶಗಳ ಬಗ್ಗೆಯಾಗಿದೆ. ನಾವು ರಿಯಾಕ್ಟಿವ್ ಕಾರ್ಯಾಚರಣೆಗಳಿಂದ (Reactive operations) ಇಂಟಲಿಜೆನ್ಟ್ ಯುಟಿಲಿಟಿ ನಿರ್ವಹಣೆಯತ್ತ ಸಾಗುತ್ತಿದ್ದೇವೆ,” ಎಂದು ಅವರು ಹೇಳಿದರು.

ಜಲಮಂಡಳಿಯು ಮುಂದಿನ ಐದು ವರ್ಷಗಳಲ್ಲಿ ನಗರದಾದ್ಯಂತ ಸ್ಮಾರ್ಟ್ ಮೀಟರಿಂಗ್ ಅಳವಡಿಸುವ, ಆದಾಯ ತರದ ನೀರನ್ನು (NRW) ಮತ್ತಷ್ಟು ಕಡಿಮೆ ಮಾಡುವ ಮತ್ತು ಇಂಟಲಿಜೆಂಟ್‌ ನಗರ ಯುಟಿಲಿಟಿಗಳಿಗಾಗಿ ರಾಷ್ಟ್ರೀಯ ಮಾದರಿಯಾಗಿ ಹೊರಹೊಮ್ಮುವ ಗುರಿ ಹೊಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಗಾದ ತುಷಾರ್‌ ಗಿರಿನಾಥ್‌, ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾರೆಡ್ಡಿ, ಎಲೆಟ್ಸ್‌ ಟೆಕ್ನೋ ಮೀಡಿಯಾ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿಇಓ ರವಿಗುಪ್ತಾ, ಕೆಪಿಎಂಜಿ ಪಾರ್ಟ್‌ನರ್‌ ಹೆಡ್‌ ಆಫ್‌ ದ ಗವರ್ನಮೆಂಟ್‌ ಅಂಡ್‌ ಪಬ್ಲಿಕ್‌ ಸರ್ವಿಸಸ್‌ ನಿಲಾಚಲ್‌ ಮಿಶ್ರಾ (ಜಿ&ಪಿಎಸ್‌) ಸೇರಿದಂತೆ ಈ ಬೃಹತ್ ಶೃಂಗಸಭೆಯಲ್ಲಿ ಜಾಗತಿಕ ಜಲ ತಜ್ಞರು, ಎಐ ಪರಿಣತರು, ನೀತಿ ನಿರೂಪಕರು, ತಂತ್ರಜ್ಞಾನ ಕಂಪನಿಗಳು, ನವೋದ್ಯಮಗಳು (ಸ್ಟಾರ್ಟ್-ಅಪ್‌ಗಳು) ಹಾಗೂ ದೇಶ-ವಿದೇಶಗಳ ನಗರ ಆಡಳಿತ ವೃತ್ತಿಪರರು ಭಾಗವಹಿಸಿದ್ದರು.

Karnataka Betting Big on AI-Driven Water Governance; BWSSB Targets ‘Utility of the Future’: CS Shalini Rajaneesh

BENGALURU, May 27: Karnataka is positioning itself as a national leader in AI-driven urban water governance, with artificial intelligence and digital technologies set to play a central role in managing future challenges such as climate change, rapid urbanisation, groundwater depletion, and infrastructure stress, Chief Secretary Dr. Shalini Rajneesh said on Tuesday.

She was speaking at the inaugural session of the National AI & Digital Water Summit 2026, organised by the Bangalore Water Supply and Sewerage Board (BWSSB) in association with elets and KPMG at Bengaluru.

Highlighting the growing pressure on cities like Bengaluru, Mysuru, Mangaluru, Dharwad, and Belagavi, Dr. Shalini Rajneesh said intelligent governance systems are becoming essential for ensuring efficient, transparent, and accountable public services.

“AI and digital intelligence are no longer optional tools for urban utilities. Real-time monitoring, predictive analytics, demand forecasting, and data-driven governance will define the future of water management,” she said.

She noted that Karnataka has already established AI Centres of Excellence and introduced policy frameworks supporting digital procurement, data sharing, and performance-based governance systems.

The Chief Secretary stressed that accountability must remain at the core of digital transformation. “Data should ultimately lead to measurable governance outcomes. Technology must strengthen public trust and institutional efficiency,” she added.

Speaking at the summit, BWSSB Chairman Dr. Ram Prasath Manohar said Bengaluru’s scale and complexity demand a shift from conventional utility operations to predictive and intelligent management systems.

“BWSSB today serves more than 14 million citizens. Managing water for one of the world’s fastest-growing metropolitan cities requires deep operational intelligence and technology-led governance,” he said.

He highlighted that BWSSB has already implemented city-scale SCADA systems, GIS-based mapping, IoT-enabled monitoring, automated leak detection systems, and smart metering pilots as part of its digital transformation journey.

According to him, BWSSB has reduced Non-Revenue Water from over 50 percent to nearly 26.5 percent, resulting in savings of nearly 200 million litres of water per day.

Dr. Ram Prasath Manohar also revealed that BWSSB’s AI-driven energy optimisation initiatives have identified nearly ₹42 crore worth of avoidable annual electricity expenditure across pumping systems.

“AI is not about dashboards. It is about predictive governance, accountability, and measurable outcomes. We are moving from reactive operations towards intelligent utility management,” he said.

He added that BWSSB aims to achieve city-wide smart metering, further reduce Non-Revenue Water, and emerge as a national benchmark for intelligent urban utilities over the next five years.

The event was attended by the Additional Chief Secretary to the Government Tushar Girinath, FKCCI President Uma Reddy, Founder and CEO of Elets Technomedia Ravi Gupta, and KPMG Partner & Head of Government and Public Services (G&PS) Nilachal Mishra, and witnessed participation from global water experts, AI specialists, policymakers, technology companies, startups, and urban governance professionals from across India and abroad.

Related Articles

Back to top button