

ಪ್ರಗತಿವಾಹಿನಿ ಸುದ್ದಿ: ಏಷ್ಯಾದ ಅತಿದೊಡ್ಡ ಏರ್ ಶೋ ಏರೋ ಇಂಡಿಯಾ-2025 ಏರ್ ಶೋಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏರ್ ಶೋ-2025ಕ್ಕೆ ಚಾಲನೆ ನೀಡಿದ್ದು, ಇಂದಿನಿಂದ 5 ದಿನಗಳ ಕಾಲ ಲೋಹದ ಹಕ್ಕಿಗಳ ಹಾರಾಟ, ಪ್ರದರ್ಶನ ಕಣ್ಮನ ಸೆಳೆಯಲಿವೆ.
ಏರ್ ಶೋಗೆ ಚಾಲನೆ ನೀಡುತ್ತಿದ್ದಂತೆ ರಕ್ಷಣಾ ಇಲಾಖೆ ಯುವರತ್ನ ಸಿನಿಮಾದ ಪವರ್ ಆಫ್ ಯೂಥ್ಸ್ ಹಾಡು ಹಾಕುವ ಮೂಲಕ ಪ್ರೇಕ್ಷಕರ ಗಮನ ಸೆಳೆಯಿತು. ಭಾರತೀಯ ಯುದ್ಧ ವಿಮಾನಗಳ ಹಾರಾಟ ಆರಂಭವಾಗಿದೆ. ಏರ್ ಶೋನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸೇನಾ ಮುಖ್ಯಸ್ಥರು ಮೊದಲಾದವರು ಭಾಗಿಯಾಗಿದ್ದಾರೆ.

ಫೆ.14ರವರೆಗೆ ಏರ್ ಶೋ ನಡೆಯಲಿದ್ದು 7 ಲಕ್ಷಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ. ಏರ್ ಶೋ ನಲ್ಲಿ ರಷ್ಯಾ, ಅಮೆರಿಕಾ ಸೇರಿದಂತೆ 90 ದೇಶಗಳು ಭಾಗಿಯಾಗಲಿವೆ.