Kannada NewsKarnataka News

ಅಕ್ಷರ ದಾಸೋಹ ಪವಿತ್ರ ಕಾರ್ಯ: ಸಚಿವ ಬಿ. ಸಿ. ನಾಗೇಶ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಅಕ್ಷರ ದಾಸೋಹ ಎನ್ನುವುದು ಪವಿತ್ರವಾಗಿರುವಂಥದ್ದು. ಮಧ್ಯಾಹ್ನ ಬಿಸಿಯೂಟ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದರು.

ಬೆಳಗಾವಿಯ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠದಲ್ಲಿ ಹುಕ್ಕೇರಿ ಹಿರೇಮಠದ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಮಕ್ಕಳು ಪೌಷ್ಟಿಕತೆಯಿಂದ ಬಳಲಬಾರದು ಎನ್ನುವ ಉದ್ದೇಶದಿಂದ ಬಿಸಿಯೂಟ, ಹಾಲು, ಚಕ್ಕೆ, ಬಾಳೆಹಣ್ಣು, ಮೊಟ್ಟೆಯನ್ನು ಕೂಡ ನೀಡುತ್ತಿದೆ.

 

ರಾಜ್ಯದಲ್ಲಿರುವ ಬಿಸಿಯೂಟ ತಯಾರಿಸುವ ಸ್ವಯಂ ಸೇವಾ ಸಂಸ್ಥೆಗಳನ್ನು ಒಗ್ಗೂಡಿಸಿ ಎಲ್ಲರೊಳಗೆ ಬದ್ಧತೆ, ಸಿದ್ಧತೆ ಬಗ್ಗೆ ಅರಿವು ಮೂಡಿಸುವ ಮೂಲಕ ರಾಜ್ಯ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಅದ್ಬುತವಾದ ಕಾರ್ಯ ಮಾಡುತ್ತಿದ್ದಾರೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಹುಕ್ಕೇರಿ ಹಿರೇಮಠದ ಶ್ರೀಗಳು ಯಾವುದೇ ಕಾರ್ಯವನ್ನು ತೆಗೆದುಕೊಂಡರೆ ಅಚ್ಚುಕಟ್ಟಾಗಿ ಮಾಡುತ್ತಾರೆ. ಹುಕ್ಕೇರಿ ಹಾಗೂ ನಾಇಂಗ್ಲಿಜ್‍ನಲ್ಲಿ 65 ಸಾವಿರ ಮಕ್ಕಳಿಗೆ ಅಕ್ಷರ ದಾಸೋಹ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕೆಎಸ್ ಎಂಎಫ್ ಅಧ್ಯಕ್ಷರಾದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸರಕಾರದ ಯೋಜನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ನಮ್ಮ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳು ಬದ್ಧರಾಗಿದ್ದಾರೆ.

 

ನಾವು ಶಿಕ್ಷಣ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ಪ್ರತಿ ವರ್ಷ ಸ್ವಯಂ ಸೇವಾ ಸಂಸ್ಥೆಗಳಿಗೆ ತರಬೇತಿಯನ್ನು ನೀಡಿ ಅವರಿಗೆ ಇನ್ನೂ ಹೆಚ್ಚಿನ ಕಾರ್ಯವನ್ನು ಮಾಡಲು ಸಹಕರಿಸಬೇಕು ಎಂದರು.

ಹಾಗೆಯೇ 51 ಸ್ವಯಂ ಸೇವಾ ಸಂಸ್ಥೆಗಳಿಗಿಂತಲೂ ಹೆಚ್ಚು ಸಂಸ್ಥೆಗಳು ಅಕ್ಷರ ದಾಸೋಹವನ್ನು ಮಾಡುತ್ತಿದ್ದಾವೆ. ಇಸ್ಕಾನ್, ಅದಮ್ಯ ಚೇತನ, ಹುಕ್ಕೇರಿ ಜನ ಕಲ್ಯಾಣ ಪ್ರತಿಷ್ಠಾನ ಮತ್ತು ಸಮೃದ್ಧಿ ಸೇವಾ ಸಂಸ್ಥೆ, ಸೊಗಲೆ ಎಂ.ಕೆ. ಹುಬ್ಬಳಿ ದಾಸೋಹ ಕೇಂದ್ರ ಹೀಗೆ 51 ಎನ್ ಜಿಓಗಳು ಕಾರ್ಯವನ್ನು ನಿರ್ವಹಿಸುತ್ತಿವೆ. ಇವುಗಳಿಗೆ ಮಾರ್ಗದರ್ಶನ ಮಾಡಬೇಕಿದೆ ಎಂದರು.

 

ಇದೇ ಸಂದರ್ಭದಲ್ಲಿ ಬೆಳಗಾವಿ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ, ಕೆಎಸ್‍ಎಂಎಫ್‍ನ ಉಪಾಧ್ಯಕ್ಷ ನಾರಾಯಣ ಸೊಗಲಿ,

 

ಖಜಾಂಚಿ ಕಲ್ಲಪ್ಪ ಬೋರಣ್ಣವರ, ಎಂ.ಕೆ.ಹುಬ್ಬಳ್ಳಿಯ ಮಂಜುನಾಥ ಅಳವಣೆ, ಎಸ್.ಎಸ್.ಮಠದ, ಎಂ.ಬಿ. ಪಾಟೀಲ, ಎಂ.ಎ.ಕೋರಿಶೆಟ್ಟಿ ಉಪಸ್ಥಿತರಿದ್ದರು. ರಾಜು ಪಡಗೂರಿ ಸ್ವಾಗತಿಸಿ ನಿರೂಪಿಸಿದರು.
ಚಪ್ಪಲಿ ಕದಿಯುವವರು, ಬೇರೆ ವಸ್ತು ಕದಿಯುವವರನ್ನು ನಾವು ನೋಡಿದ್ದೆವು, ಆದರೆ ವೋಟ್ ಕಳ್ಳತನ ಮಾಡುವುದನ್ನು ನೋಡಿರಲಿಲ್ಲ

https://pragati.taskdun.com/we-had-seen-people-stealing-slippers-stealing-other-things-but-not-stealing-votes/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button