
ಪ್ರಗತಿವಾಹಿನಿ ಸುದ್ದಿ: ಮೀನುಗಾರಿಕಾ ಬೋಟ್ ವೊಂದು ಸಮುದ್ರ ಮಧ್ಯೆಯೇ ಬೆಂಕಿಗಾಹುತಿಯಾಗಿರುವ ಘಟನೆ ಮಹಾರಾಷ್ಟ್ರದ ಅಲಿಬಾಗ್ ನಲ್ಲಿ ನಡೆದಿದೆ.
ಮೀನುಗಾರಿಕೆಗೆ 20 ಜನರು ಬೋಟ್ ನಲ್ಲಿ ತೆರಳಿದ್ದ ವೇಳೆ ಈ ಅಘಢ ಸಂಭವಿಸಿದೆ. ಸಮುದ್ರ ಮಧ್ಯೆಯೇ ಬೋಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಧಗಧಗನೆ ಹೊತ್ತಿ ಉರಿದಿದೆ.
ಬೋಟ್ ನಲ್ಲಿದ್ದವರು ಸಮುದ್ರಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ತಕ್ಷಣ ಮತ್ತೋಂದು ಬೋಟ್ ನಲ್ಲಿ ತೆರಳಿ ಅವರನ್ನು ರಕ್ಷಿಸಲಾಗಿದೆ. ಮೀನುಗಾರಿಕ ಅಬೋಟ್ ನಲ್ಲಿ ಇದ್ದ ಸುಮಾರು 20 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.