Kannada NewsKarnataka NewsLatest

ಕೊವಿಡ್ ಸಂಕಷ್ಟ ಎದುರಿಸಲು ಕೆಎಲ್ಇ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆ

18 ವರ್ಷ ಮೇಲ್ಪಟ್ಟ ಯುವಕರಿಗೆ ವ್ಯಾಕ್ಸಿನ ಅಭಿಯಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಧೃಡ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಕೊರೊನಾ ಮಹಾಮಾರಿಯನ್ನು ಎದುರಿಸಲು ವ್ಯಾಕ್ಸಿನ್ (ಚುಚ್ಚುಮದ್ದು) ಪ್ರಬಲ ಅಸ್ತ್ರವಾಗಿದೆ. ಆದ್ದರಿಂದ ಯಾವುದೇ ಹಿಂಜರಿಕೆ ಇಲ್ಲದೇ ಸರ್ವರೂ ವ್ಯಾಕ್ಸಿನ ಹಾಕಿಸಿಕೊಂಡು ಕೋವಿಡ್ ನಿಂದ ಮುಕ್ತಗೊಳ್ಳಬೇಕೆಂದು ಸಂಸದರಾದ ಮಂಗಲಾ ಸುರೇಶ ಅಂಗಡಿ ಹೇಳಿದರು.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ೧೮ ವರ್ಷ ಮೇಲ್ಪಟ್ಟ ಯುವಕರಿಗೆ ವ್ಯಾಕ್ಸಿನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವವನ್ನೇ ತಲ್ಲಣಗೊಳಿಸಿರುವ ಕೊವಿಡ್ ಈಗ ಎರಡನೇ ಅಲೆಯ ರೂಪದಲ್ಲಿ ಬಂದೆರಗಿದೆ. ಅದನ್ನು ಸಮರ್ಥವಾಗಿ ನಿಭಾಯಿಸಲು ಸರಕಾರವು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಈಗ ನಿಯಂತ್ರಣಕ್ಕೆ ಬರುತ್ತಿದ್ದರೂ ಕೂಡ ಅದರಿಂದ ರಕ್ಷಣೆ ಪಡೆಯಲು ವ್ಯಾಕ್ಸಿನ ಪಡೆದುಕೊಳ್ಳಬೇಕೆಂದು ಕೋರಿದರು.
ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಡಗಿಮಠ ಅವರು ಮಾತನಾಡಿ, ಭಾರತವನ್ನು ತಲ್ಲಣಗೊಳಿಸಿರುವ ಕೊರೊನಾ ವೈರಸ್ ಕೋವಿಡ್ -೧೯ ಸಾಂಕ್ರಾಮಿಕ ರೋಗದ ತುರ್ತು ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಈ ಭಾಗದ ಜನರಿಗೆ ಸಕಲ ಸೇವೆ ನೀಡಲು ಬದ್ದವಾಗಿದ್ದು, ಗರ್ಭಿಣಿ ಮತ್ತು ಮಕ್ಕಳ ಆರೈಕೆಗಾಗಿ ೪೦ ಹಾಸಿಗೆಗಳನ್ನು ಮೀಸಲಿಟ್ಟು ಚಿಕಿತ್ಸೆಗ್ಸೆ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ. ಚಿಕ್ಕೋಡಿ ಹಾಗೂ ಗೋಕಾಕ ಭಾಗದ ಜನರಿಗೆ ವ್ಯಾಕ್ಸಿನ್ ನೀಡಿಕೆ ವೇಗ ಪಡೆದುಕೊಳ್ಳಬೇಕು. ಅದಕ್ಕೆ ಸಕಲ ವ್ಯವಸ್ಥೆಯನ್ನು ಮಾಡಲು ಜಿಲ್ಲಾಡಳಿತ ಹಾಗೂ ಮುಖ್ಯ ವ್ಯಾಕ್ಸಿನ್ ಸಂಯೋಜನಾಧಿಕಾರಿ ಗಡಾದ ಅವರಿಗೆ ಸಲಹೆ ನೀಡಲಾಗಿದೆ. ವ್ಯಾಕ್ಸಿನ ಚುಚ್ಚಿಸಿಕೊಂಡರೆ ಕೊವಿಡ್‌ನಿಂದ ಪಾರಾಗಬಹುದು ಎಂದು ಅನೇಕ ಅಧ್ಯಯನಗಳು ತಿಳಿಸಿವೆ. ಆದ್ದರಿಂದ ಎಲ್ಲರೂ ಅದರಲ್ಲಿಯೂ ಮುಖ್ಯವಾಗಿ ಯುವ ಸಮುದಾಯ ವ್ಯಾಕ್ಸಿನ್ ಪಡೆಯುವಲ್ಲಿ ಯಾವುದೇ ರೀತಿಯ ಹಿಂಜರಿಕೆಯನ್ನು ತೋರಬಾರದು ಎಂದು ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, ಕೋವಿಡ್ ಎರಡನೇ ಅಲೆ ಹಲವು ರೂಪಾಂತರಗಳ ಮೂಲಕ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿತ್ತು. ಅದಕ್ಕೆ ಚಿಕಿತ್ಸೆ ನೀಡಲು ಸಕಲ ವ್ಯವಸ್ಥೆಯನ್ನು ಆಸ್ಪತ್ರೆಯಲ್ಲಿ ಮಾಡಿಕೊಳ್ಳಲಾಗಿದೆ. ಕೋವಿಡ್ ಸೊಂಕಿಗೆ ಒಳಗಾಗುತ್ತಿರುವ ಗರ್ಭಿಣಿಯರ ಆರೈಕೆಗಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ೨೦ ಹಾಸಿಗೆಗಳ ಪ್ರತ್ಯೇಕ ವಾರ್ಡ ಹಾಗೂ ಲೇಬರ ರೂಮ್ ಪ್ರಾರಂಭಿಸಲಾಗಿದೆ. ಸಂಭವನೀಯ ಮೂರನೇಯ ಅಲೆಯ ಸಂದರ್ಭದಲ್ಲಿ ಕೋವಿಡ್ -೧೯ ಸೊಂಕಿಗೆ ಸಾಕಷ್ಟು ಮಕ್ಕಳು ಬಳಲಲಿದ್ದಾರೆ ಎಂದು ಅಂದಾಜಿಸಲಾಗಿದ್ದು, ಮಕ್ಕಳ ಚಿಕಿತ್ಸೆಯಲ್ಲಿ ಯಾವುದೇ ತೊಂದರೆಯುಂಟಾಗಬಾರದೆಂದು ಕಾರ‍್ಯಪ್ರವೃತ್ತರಾಗಿರುವ ಮಕ್ಕಳ ತಜ್ಞವೈದ್ಯರು ಚಿಕಿತ್ಸೆ ನೀಡಲು ಸಿದ್ದರಾಗಿ ನಿಂತಿದ್ದಾರೆ. ಅದಕ್ಕಾಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ ಸಮೇತ ತೀವ್ರ ನಿಗಾ ಘಟಕದ ೨೦ ಹಾಸಿಗೆಗಳ ಪ್ರತ್ಯೇಕ ವಾರ್ಡನ್ನು ಪ್ರಾರಂಭಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಯುಎಸ್‌ಎಂ ಕೆಎಲ್‌ಇ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ, ಡಾ. ವಿ ಎಸ್ ಸಾಧುನವರ, ಕೆಎಲ್‌ಇ ವಿಶ್ವವಿದ್ಯಾಯದ ಕುಲಪತಿ ಡಾ. ವಿವೇಕ ಸಾವೋಜಿ, ರಜಿಸ್ಟ್ರಾರ ಡಾ. ವಿ ಎ ಕೋಠಿವಾಲೆ, ಡಾ. ಬಸವರಾಜ ಬಿಜ್ಜರಗಿ, ಡಾ. ರಾಜಶೇಖರ ಸೋಮನಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿರಿದ್ದರು.

ರಾಜ್ಯದ ಪಾಲಿಗೆ ಶುಭ ಸುದ್ದಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button