Kannada NewsKarnataka NewsLatest

ಬೆಡ್ ಲಭ್ಯತೆಯೂ ಸೇರಿ ಬೆಳಗಾವಿ ಜಿಲ್ಲೆಯ ಸಮಗ್ರ ಕೊರೋನಾ ಮಾಹಿತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯ ಕೊರೋನಾ ಸಂಬಂಧಿತ ಸಮಗ್ರ ಮಾಹಿತಿ ಈಗ ಒಂದೇ ಕಡೆ ಲಭ್ಯ.
ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ

ಈವರೆಗೆ ಬೆಡ್ ಮಾಹಿತಿ ಸೇರಿದಂತೆ ಎಲ್ಲದಕ್ಕೂ ತಡಕಾಡಬೇಕಿತ್ತು. ಆದರೆ ಈಗ ನಿಮ್ಮ ಬೆರಳ ತುದಿಯಲ್ಲಿ ಎಲ್ಲ ಮಾಹಿತಿಗಳೂ ಲಭ್ಯವಾಗುವಂತೆ ಮಾಡಿದ್ದಾರೆ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್. ಹರೀಶ್ ಕುಮಾರ ನಿನ್ನೆಯಷ್ಟೆ ಮಾಹಿತಿ ನೀಡಿದ್ದರು, 24 ಗಂಟೆಯಲ್ಲಿ ಎಲ್ಲ ಮಾಹಿತಿ ನಿಮ್ಮ ಮೊಬೈಲ್ ನಲ್ಲಿ ಸಿಗುವಂತೆ ಮಾಡಲಾಗುವುದು ಎಂದು. ಈಗ ಅದು ಆಗಿದೆ.

ಟೆಸ್ಟಿಂಗ್ ಇನ್ಫಾರ್ಮೇಶನ್, ಆಸ್ಪತ್ರೆ ಮತ್ತು ಬೆಡ್ ಮಾಹಿತಿ, ಸಹಾಯವಾಣಿ, ರೆಮಿಡಿಸಿವರ್ ಬೇಡಿಕೆ, ಆಕ್ಸಿಜನ್ ಮಾಹಿತಿ, ವ್ಯಾಕ್ಸಿನೇಶನ್ ಮಾಹಿತಿ ಇತ್ಯಾದಿ ಎಲ್ಲವೂ ಇಲ್ಲಿ ಸಿಗುತ್ತದೆ.

ಸರಕಾರಿ ಆಸ್ಪತ್ರೆ ಮಾಹಿತಿ ಸಿಗುತ್ತಿಲ್ಲ

ಆದರೆ ಈ ವೆಬ್ ಸೈಟ್ ಕ್ಲಿಕ್ ಮಾಡಿದರೆ ಸಧ್ಯಕ್ಕೆ ಸರಕಾರಿ ಆಸ್ಪತ್ರೆಗಳ ಮಾಹಿತಿ ಸಿಗುತ್ತಿಲ್ಲ. ಈ ಬಗ್ಗೆ ಪ್ರಗತಿವಾಹಿನಿ ಜಿಲ್ಲಾಧಿಕಾರಿಗಳ ಗಮನ ಸೆಳೆದಿದೆ. ಆ ಮಾಹಿತಿಗಳನ್ನು ಈಗ ಅಪ್ ಲೋಡ್ ಮಾಡಲಾಗುತ್ತಿದೆ. ಇನ್ನು ಸ್ವಲ್ಪ ಹೊತ್ತಿನಲ್ಲಿ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇದರ ಜೊತೆಗೆ, ವೆಬ್ ಸೈಟ್ ಇಂಗ್ಲೀಷ್ ನಲ್ಲಿದ್ದು, ಕನ್ನಡದಲ್ಲೂ ಮಾಹಿತಿ ಸಿಗುವಂತೆ ಮಾಡಬೇಕಿದೆ.
ಇಲ್ಲಿ ಕ್ಲಿಕ್ ಮಾಡಿ – https://belagavicovid19.com

Belagavi District information

1.Testing information
2.Hospitals & Beds
3.Helpline information
4.Remdesivir Requests
5.Oxygen information
6.Vaccination info
All covid-19 related Belagavi District information available in this website.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button