*ಜೊಲ್ಲೆ ಗ್ರೂಪ್ ವತಿಯಿಂದ ಆಲ್ ಇಂಡಿಯಾ ಎ ಗ್ರೇಡ್ ಕಬಡ್ಡಿ ಪಂದ್ಯ; ಮುನ್ನಡೆ ಕಾಯ್ದುಕೊಂಡ ಬಾರಾಮತಿ, ಹರಿಯಾಣ, ಮುಂಬೈ ತಂಡ*
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ನಿಪ್ಪಾಣಿ ಮುನ್ಸಿಪಲ್ ಹೈಸ್ಕೂಲ್ ಆವರಣದಲ್ಲಿ ಜೊಲ್ಲೆ ಗ್ರುಪ್ ವತಿಯಿಂದ ನಡೆಯುತ್ತಿರುವ ಪುರುಷ-ಮಹಿಳೆಯರ ಆಲ್ ಇಂಡಿಯಾ ಎ ಗ್ರೇಡ್ ಕಬಡ್ಡಿ ಪಂದ್ಯಾವಳಿಯಲ್ಲಿ ಮೊದಲ ದಿನ ಲೀಗ್ ಪಂದ್ಯದಲ್ಲಿ ಪುರುಷ ವಿಭಾಗದಲ್ಲಿ ಜಮ್ಮು ಕಾಶ್ಮೀರ ತಂಡದ ಜೊತೆ ಬಾರಾಮತಿ ಸ್ಪೋರ್ಟ್ಸ್ ಅಕಾಡೆಮಿ ನಡುವೆ ನಡೆಯಿತು.
ಬಾರಾಮತಿ ಸ್ಪೋರ್ಟ್ಸ್ ಅಕಾಡೆಮಿ ತಂಡ 36 ಅಂಕಗಳಿಂದ ಬಾರಾಮತಿ ತಂಡದ ವಿರುದ್ಧ ಜಯಗಳಿಸಿತು. ಬೆಳಗಾವಿ ಟೈಗರ್ಸ್ ಮತ್ತು ಪೈ ಸ್ಪೋರ್ಟ್ಸ್ ಸ್ಕೂಲ್ ಹರಿಯಾಣ ನಡುವೆ ನಡೆದ ಪಂದ್ಯದಲ್ಲಿ ಬೆಳಗಾವಿ ಟೈಗರ್ಸ್ 30 ಅಂಕ ಗಳಿಸಿದರೇ, ಪೈ ಸ್ಪೋರ್ಟ್ಸ್ ಸ್ಕೂಲ್ ಹರಿಯಾಣ 46 ಅಂಕ ಗಳಿಸಿ 16 ಅಂಕಗಳಿಂದ ವಿಜೇತವಾಯಿತು.
ಮಹಿಳೆಯರ ವಿಭಾಗದಲ್ಲಿ ವಿಶ್ವ ಸಂತ ಮುಂಬೈ ತಂಡದ ಜೊತೆ ಹಿರಣ್ಯಕೇಶಿ ಕೊಲ್ಲಾಪುರ ತಂಡದ ಜೊತೆ ನಡೆಯಿತು. ವಿಶ್ವ ಸಂತ ಮುಂಬೈ ತಂಡ 28 ಅಂಕಗಳಿಸಿದರೇ ಹಿರಣ್ಯಕೇಶಿ ಕೊಲ್ಲಾಪುರ ತಂಡ 26 ಅಂಕಗಳಿಸಿತು. 2 ಅಂಕಗಳಿಂದ ಮುಂಬೈ ತಂಡ ಗೆಲುವಿನ ನಗೆಬಿರಿತು.
ಈ ಸಂದರ್ಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ, ಅಭಿನವ ಮಂಜುನಾಥ ಸ್ಚಾಮೀಜಿ, ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ, ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಯವಂತ ಬಾಟಲೆ. ನೀತಾ ಬಾಗಡೆ. ರಾಜೇಶ ಗುಂದೇಶಾ. ವಿಶ್ವನಾಥ ಕಮತೆ.ಅಭಯ ಮಾನ್ವಿ. ಸಿದ್ದು ನರಾಟೆ. ಪ್ರಣವ ಮಾನ್ವಿ. ಜಯಾನಂದ ಜಾಧವ. ಸುರೇಶ ಶೇಟ್ಟಿ. ಪ್ರತಾಪ ಪಟ್ಟನಶೆಟ್ಟಿ. ತಹಶೀಲ್ದಾರ ಪ್ರವೀಣ ಕರಾಂಡೆ. ಕಬ್ಬಡ್ಡಿ ತಂಡದ ಆಯೋಜಕ ಎಂ.ಕೆ.ಶಿರಗುಪ್ಪಿ. ಡಯಟ್ ದೈಹಿಕ ಶಿಕ್ಷಣ ಉಪನ್ಯಾಸಕ ಎಸ್.ಬಿ.ಚೌಗಲೆ.ಕಬ್ಬಡ್ಡಿ ಅಸೋಸಿಯೇಷನ್ ರೇಪರಿ ಅಧ್ಯಕ್ಷ ಬಿ.ಸಿ.ಹರಲಾಪೂರ ಮುಂತಾದವರು ಇದ್ದರು.
*ಬಜೆಟ್ ಅಧಿವೇಶನಕ್ಕೆ ದಿನಾಂಕ ನಿಗದಿ*
https://pragati.taskdun.com/budget-sessionkarnatakafeb-10thminister-madhuswamy/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ