Latest

*ಗರ್ಭಿಣಿ ಮಾಡಿ, 5 ಲಕ್ಷ ಪಡೆಯಿರಿ*

*ವಿಲಕ್ಷಣ ಜಾಹೀರಾತು ನಂಬಿ ಕಂಪನಿಯಿಂದ ಮೋಸಹೋದ ಜನರು*

ಪ್ರಗತಿವಾಹಿನಿ ಸುದ್ದಿ: ಇದೆಂತಹ ವಿಲಕ್ಷಣ ಜಾಬ್ ಆಫರ್. ಆಲ್ ಇಂಡಿಯಾ ಪ್ರಗ್ನೆಂಟ್ ಜಾಬ್ ಎಂಬ ಹೆಸರಿನ ಕಂಪನಿಯೊಂದು ವಿಚಿತ್ರ ಉದ್ಯೋಗದ ಭರವಸೆ ನೀಡಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

Home add -Advt

ಬಿಹಾರದ ನವಾಡಾದಲ್ಲಿ ಈ ಘಟನೆ ನಡೆದಿದೆ. ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂಪಾಯಿ ಪಡೆಯಿರಿ ಎಂದು ಕಂಪನಿ ಜಾಹೀರಾತು ಹೊರಡಿಸಿತ್ತು.

ಈ ಜಾಹೀರಾತು ನೋಡಿ ಆಕರ್ಷಿತರಾದ ನಿರೋದ್ಯೋಗಿ ಯುವಕರು, ವಿದ್ಯಾರ್ಥಿಗಳು ಕೆಲಸಕ್ಕೆ ಒಪ್ಪಿದ್ದಾರೆ. ಹೀಗೆ ಬಂದ ಉದ್ಯೋಗಾಕಾಂಕ್ಷಿಗಳಿಂದ ವಿವಿಧ ಶುಲ್ಕದ ಹೆಸರಲ್ಲಿ ಹಣ ಕಟ್ಟಿಸಿಕೊಂಡ ಕಂಪನಿ ಮೋಸ ಮಾಡಿದೆ.

ಹಣ ಕಳೆದುಕೊಂಡು ಮೋಸ ಹೋದ ಯುವಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಪ್ರಮುಖ ಆರೋಪಿ ರಾಜೇಶ್ ಕುಮಾರ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Related Articles

Back to top button