Latest

ಆಕಾಶವಾಣಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಕಾಶವಾಣಿ ಬೆಂಗಳೂರು ಕೇಂದ್ರ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ. ಪ್ರಾದೇಶಿಕ ಸುದ್ದಿ ವಿಭಾಗದಲ್ಲಿ ಸಾಂದರ್ಭಿಕ ಸುದ್ದಿವಾಚಕರು, ಅನುವಾದಕರುಗಳಿಗೆ ಅರ್ಹ ಅಭ್ಯರ್ಥಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದ ಪದವೀಧರರಾಗಿರಬೇಕು. ಕನ್ನಡ ಭಾಷೆಯಲ್ಲಿ ಹಿಡಿತ, ಪ್ರಸಾರಕ್ಕೆ ಯೋಗ್ಯವಾದ ಉತ್ತಮ ಗುಣಮಟ್ಟದ ಧ್ವನಿ ಹೊಂದಿರಬೇಕು.

ರೇಡಿಯೋ ಅಥವಾ ಟಿವಿ ಮಾಧ್ಯಮ ಕೆಲಸದ ಅನುಭವ ಹೊಂದಿರಬೇಕು. ಕಂಪ್ಯೂಟರ್ ಅಪ್ಲಿಕೇಷನ್ ತಿಳುವಳಿಕೆ ಹೊಂದಿದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದವರಿಗೆ ಆದ್ಯತೆ.

21 ವರ್ಷದಿಂದ 50 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ಸಾಮಾನ್ಯ ವರ್ಗಕ್ಕೆ 300 ರೂ ಹಾಗೂ ಎಸ್ ಸಿ/ಎಸ್ ಟಿ/ಓಬಿಸಿ 225 ರೂ. ನಿಗದಿ ಪಡಿಸಲಾಗಿದೆ.

Home add -Advt

ಅರ್ಜಿ ಶುಲ್ಕವನ್ನು The station Director, All India Radio, Bangalore ಇವರ ಹೆಸರಲ್ಲಿ ಬ್ಯಾಂಕ್ ಡ್ರಾಫ್ಟ್ ಮೂಲಕ ಪಾವತಿಸಬೇಕು.

ಅಭ್ಯರ್ಥಿ ಪುರ್ಣ ವಿವರಗಳು, ಅಗತ್ಯ ದಾಖಲಾತಿಗಳ ಪ್ರತಿಗಳು ಹಾಗೂ ಅರ್ಜಿ ಶುಲ್ಕದ ಬ್ಯಾಂಕ್ ಡ್ರಾಫ್ಟ್ ಗಳನ್ನು ಒಳಗೊಂಡ ಅರ್ಜಿ ರಿಜಿಸ್ಟರ್ಡ್ ಅಂಚೆ ಮೂಲಕ ಖುದ್ದಾಗಿ ಜೂನ್ 10ರೊಳಗೆ ಈ ವಿಳಾಸಕ್ಕೆ ಕಳುಹಿಸಬೇಕು.

The Deputy Director General (E) & HOO) Attn: Regional News Unit,All India Radio, Raj Bhavan
ನೇಮಕಾತಿ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ: 8317466729, 9448159726 ಹಾಗೂ ದೂರವಾಣಿ ಸಂಖ್ಯೆ 080 22356344/22373000ಗೆ ಕರೆ ಮಾಡಬಹುದು.
ಬಾಲಕನ ಮೇಲೆ ಹರಿದ ನೀರಿನ ಟ್ಯಾಂಕರ್; ಸ್ಥಳದಲ್ಲೇ ಪ್ರಾಣಬಿಟ್ಟ 3 ವರ್ಷದ ಕಂದ

Related Articles

Back to top button