Election NewsKannada NewsKarnataka NewsPolitics

ಮೈತ್ರಿಗೆ ಸಮಸ್ಯೆ ಆಗುವುದಿಲ್ಲ, ಗೌಡರೇ ನಿಮ್ಮ ಆರೋಗ್ಯ ನೋಡಿಕೊಳ್ಳಿ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಲಹೆ

ಪ್ರಗತಿವಾಹಿನಿ ಸುದ್ದಿ : ಹಾಸನ ಲೈಂಗಿಕ ಪ್ರಕರಣ ಸಂಬಂಧ ಸಚಿವ ರೇವಣ್ಣ ಬಂಧನದಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಯಾವುದೇ ಸಮಸ್ಯೆ ಆಗಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ತಪ್ಪು ಯಾರು ಮಾಡಿದರೂ ಒಂದೇ, ಕಾನೂನು ತನ್ನದೇ ಅದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ. ಆದ್ರೆ ರೇವಣ್ಣ ಬಂಧನದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಒಡೆದು ಹೋಗುತ್ತದೆ ಎಂದು ಹೇಳಲಾಗುತ್ತಿದೆ. ಅವೆಲ್ಲವೂ ಸುಳ್ಳು. ಇದರಿಂದ ಮೈತ್ರಿಗೆ ಏನೂ ಎಫೆಕ್ಟ್ ಅಗಲ್ಲ ಎಂದು ಸ್ಪಷ್ಟಪಡಿಸಿದ್ರು

ಈ ಪ್ರಕರಣದಿಂದ ದೇವೇಗೌಡರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ, ಚುನಾವಣೆಯ ಬಗ್ಗೆ ಅವರಿಗೆ ಚಿಂತೆ ಬೇಡ, ಅವರು ಮೊದಲು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಲಿ, ಚುನಾವಣೆಯಲ್ಲಿ ನಾವು ಒಂದಾಗಿ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ಬಿಎಸ್ ವೈ ಹೇಳಿದ್ದಾರೆ.

Home add -Advt

Related Articles

Back to top button