GIT add 2024-1
Beereshwara 33

ಯೋಗ್ಯ ವ್ಯಕ್ತಿಗೆ ಮತ ಕೊಡಿ: ಹುಕ್ಕೇರಿ ಶ್ರೀ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಬರುವ ಲೋಕಸಭಾ ಚುನಾವಣೆಯಲ್ಲಿ ಯಾರೂ ಮತದಾನದಿಂದ ದೂರ ಉಳಿಯಬಾರದು ಎಂದು ಹುಕ್ಕೇರಿ,‌ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಮನವಿ ಮಾಡಿದ್ದಾರೆ. 

ಅವರು ಶಿರಸಿ ನಗರದ  ಹೊರ ವಲಯದ ವೇದ ಆರೋಗ್ಯ ಕೇಂದ್ರದ ನಿಸರ್ಗ ಮನೆಯಲ್ಲಿ ಜರುಗಿದ ಮತದಾನ ಜಾಗ್ರತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಎಲ್ಲರೂ ಸಾಧ್ಯವಾದಷ್ಟು ‌ಸಂತೋಷವಾಗಿರಬೇಕು. ಇದು ಆರೋಗ್ಯದ ಮೊದಲ ಸೂತ್ರ‌. ನನ್ನಿಂದಲೆ ಎಲ್ಲ‌ ಎಂದಾಗ ರೋಗಗಳು ಬರುತ್ತವೆ. ನಾ ಎನ್ನುವ ಅಹಂಕಾರ ತೆಗೆಯಬೇಕು. ಅಹಂಕಾರ ಬಂದರೆ  ಅದರಷ್ಟು ಅಪಾಯಕಾರಿ‌ ಬೇರಿಲ್ಲ ಎಂದರು. 

Emergency Service

ಯಾರೇ ಆದರೂ ಇದ್ದಿದ್ದನ್ನು ಇದ್ದಂತೆ ಹೇಳಿದರೆ ದೇಶದ ಸತ್ ಪ್ರಜೆಯಾಗಲು ಸಾಧ್ಯವಿದೆ. ಕಾರಣ ಮೇ 7 ರಂದು ಜರಗಲಿರುವ ಮತದಾನದಲ್ಲಿ  ಎಲ್ಲರೂ ಭಾಗವಹಿಸಿ ಯೋಗ್ಯ ವ್ಯಕ್ತಿಗೆ  ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ಪ್ರಸಿದ್ದ ವಾಸ್ತು ತಜ್ಞ ಶ್ರೀಧರ ಪರಮಾಳಾಚಾರ್, ಡಾ.ವೆಂಕಟರಮಣ ಹೆಗಡೆ ಇತರರು ಇದ್ದರು. ಬಳಿಕ‌ ಯಕ್ಷಗಾನ ಪ್ರದರ್ಶನದಲ್ಲಿ ಮತದಾನ ಕುರಿತು ಜಾಗ್ರತೆ ಮೂಡಿಸಲಾಯಿತು. ತುಳಸಿ ಹೆಗಡೆ ಪ್ರಸ್ತುತಿಯ ಲೀಲಾವತಾರಂ ರೂಪಕ ನಡೆಯಿತು.

Laxmi Tai add
Bottom Add3
Bottom Ad 2