
ಪ್ರಗತಿವಾಹಿನಿ ಸುದ್ದಿ; ಮುಂಬೈ: ರಣಬೀರ್ ಮತ್ತು ಆಲಿಯಾ ಭಟ್ ನಡುವಿನ ಸಂಬಂಧದ ಕುರಿತು ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಇವರಿಬ್ಬರೂ ಯಾವಾಗ ಮದುವೆಯಾಗುತ್ತಾರೆ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಹಲವಾರು ದಿನಗಳಿಂದ ಕಾಡುತ್ತಿದೆ.
ಈ ನಡುವೆ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದ ರಣಬೀರ್ ಕೋವಿಡ್ ಸೋಂಕು ಹರಡಿರದಿದ್ದರೆ ನಾವು 2020ರಲ್ಲೇ ಮದುವೆಯಾಗುತ್ತಿದ್ದೆವು ಎಂದೂ ಹೇಳಿಕೊಂಡಿದ್ದಾರೆ.
ಇನ್ನೊಂದೆಡೆ ಇತ್ತೀಚಗೆ ಸುದ್ದಿವಾಹಿನಿಯೊಂದರ ಸಂದರ್ಶನದ ವೇಳೆ ಮಾತನಾಡಿರುವ ಆಲಿಯಾ, ನಾನು ಈಗಾಗಲೇ ರಣಬೀರ್‍ನನ್ನು ಮಾನಸಿಕವಾಗಿ ವಿವಾಹವಾಗಿದ್ದೇನೆ ಎಂದಿದ್ದಾರೆ. ಅಧೀಕೃತವಾಗಿ ವಿವಾಹವಾಗುವ ಸಂದರ್ಭ ಅತ್ಯಂತ ಮಧುರವಾಗಿರಲಿದೆ ಎಂದು ಹೇಳಿದ್ದಾರೆ.
ಬಾಲಿವುಡ್‍ನ ಈ ಜೋಡಿಯ ವಿವಾಹ ಯಾವಾಗ ಆಗಲಿದೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಹಾಗೆಯೇ ಉಳಿದಿದ್ದು ಕಾತರದಿಂದ ನಿರೀಕ್ಷಿಸುವಂತಾಗಿದೆ.
ಹನಿಮೂನ್ ನಲ್ಲಿ ಮೌನಿ ರಾಯ್ ಹಾಟ್ ಲುಕ್



