ಪ್ರಗತಿ ವಾಹಿನಿ ಸುದ್ದಿ; ಜಮ್ಮು: ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾದ ಅಮರನಾಥ ಯಾತ್ರೆಗೆ ಈ ಬಾರಿ ಅವಕಾಶ ನೀಡಲಾಗುತ್ತಿದೆ. ಈ ಬಾರಿಯ ವಾರ್ಷಿಕ ಅಮರನಾಥ ಯಾತ್ರೆ ಜೂನ್ 30ರಿಂದ ಯಾತ್ರೆ ಪ್ರಾರಂಭಗೊಳ್ಳಲಿದ್ದು ಆಗಸ್ಟ್ 11ಕ್ಕೆ ಸಂಪನ್ನಗೊಳ್ಳುತ್ತದೆ ಎಂದು ಶ್ರೀ ಅಮರನಾಥಜಿ ಶ್ರೈನ್ ಬೋರ್ಡ್ನ ಸಿಇಒ ನಿತೀಶ್ವರ್ ಕುಮಾರ್ ತಿಳಿಸಿದ್ದಾರೆ.
ಯಾತ್ರೆಗೆ ಏ.11ರಿಂದ ನೋಂದಣಿ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಮ್ಮುನ ರಂಭನ್ ಜಿಲ್ಲೆಯಲ್ಲಿ ಯಾತ್ರಿಗಳ ವಸತಿಗಾಗಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗಿದೆ. ಇಲ್ಲಿ ಸುಮಾರು 3000 ಯಾತ್ರಾರ್ಥಿಗಳು ತಂಗಲು ಅವಕಾಶವಿದೆ. ಇಡೀ ಯಾತ್ರೆಯ ಅವಧಿಯಲ್ಲಿ ಸುಮಾರು 3 ಲಕ್ಷ ಜನ ಭಕ್ತರು ಅಮರನಾಥಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.
ನೋಂದಣಿ ಎಲ್ಲಿ ?
ಜಮ್ಮು ಮತ್ತು ಕಾಶ್ಮೀರದ 446 ಬ್ಯಾಂಕ್ ಶಾಖೆಗಳು, ಅಲ್ಲದೇ ದೇಶಾದ್ಯಂತ 100ಕ್ಕೂ ಹೆಚ್ಚು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೆಸ್ ಬ್ಯಾಂಕ್ಗಳ ಶಾಖೆಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಯಾತ್ರಿಗಳಿಗೆ ನಿರ್ಧಿಷ್ಟಡ ಗುರುತಿನ ಚೀಟಿಯನ್ನು ನೀಡಲಾಗುತ್ತಿದ್ದು ಇದರಿಂದ ಯಾತ್ರಿಗಳನ್ನು ತ್ವರಿತವಾಗಿ ಸಂಪರ್ಕಿಸಲು ಮತ್ತು ಗುರುತಿಸಲು ಅನುಕೂಲವಾಗಲಿದೆ ಎಂದು ಸಿಇಒ ನಿತೀಶ್ವರ್ ಕುಮಾರ್ ವಿವರಿಸಿದ್ದಾರೆ.
ಎಲ್ಲಾ ಬ್ಯಾಂಕ್ ಎಟಿಎಂ ಗಳಿಗೂ ಕಾರ್ಡ್ ಲೆಸ್ ಕ್ಯಾಶ್ ಸೌಲಭ್ಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ