
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಬೇವಾಡಿ ಗ್ರಾಮದ ಶ್ರೀ ಮಸಣಾಯಿ ಮಂದಿರದ ಜೀರ್ಣೋದ್ಧಾರದ ಸಲುವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು 3 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಿದ್ದು, ಸ್ಥಳೀಯ ಜನಪ್ರತಿನಿಧಿಗಳು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಕಾಂಗ್ರೆಸ್ ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಸೇರಿ ಚೆಕ್ ನ್ನು ದೇವಸ್ಥಾನ ಕಮೀಟಿಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸರಿತಾ ನಾಯಕ, ಸಂಗೀತಾ ಅಂಬೇಕರ್, ಸುಚಿತ್ ಸಾಂಬ್ರೇಕರ್, ಪುಂಡಲೀಕ ಬಾಂದುರ್ಗೆ, ಯಲ್ಲಪ್ಪ ಲೋಹಾರ, ದತ್ತು ಚೌಗುಲೆ, ಮಲ್ಲಪ್ಪ ತರಳೆ, ರಾಜು ಕೊಚೇರಿ, ವಿಕ್ರಂ ತರಳೆ, ಕುಲದೀಪ ತರಳೆ, ಮಿಲೀಂದ್ ಬಾತ್ಕಂಡೆ, ದೇವಸ್ಥಾನ ಕಮೀಟಿಯವರು ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ