
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಬೇವಾಡಿ ಗ್ರಾಮದಿಂದ ಮಣ್ಣೂರ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗಾಗಿ 80 ಲಕ್ಷ ರೂ. ಮಂಜೂರು ಮಾಡಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರಗಳ ರಸ್ತೆಗಳಲ್ಲಿ ಬಹುತೇಕ ಕಾಂಕ್ರೀಟೀಕರಣ ಮಾಡಲಾಗಿದ್ದು ಇವುಗಳು ಬಹುಕಾಲ ಬಾಳಿಕೆ ಬರುವಂತೆ ಜನತೆ ಉಪಯೋಗಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಮಯದಲ್ಲಿ ಅಮುಲ್ ಭಾತ್ಕಂಡೆ, ಯುವರಾಜಣ್ಣ ಕದಂ, ಯುವ ಕಾಂಗ್ರೆಸ್ ಮುಖಂಡ ಶಿವಾಜಿ ಕಾಂಬಳೆ, ಮೃಣಾಲ್ ಹೆಬ್ಬಾಳಕರ, ವಿಕ್ರಂ ತರಳೆ, ಪುಂಡಲೀಕ ಬಾಂದುರ್ಗೆ, ಸಂಗೀತಾ ಅಂಬೇಕರ್, ಯಲ್ಲಪ್ಪ ಲೋಹಾರ, ಮಲಪ್ಪ ತರಳೆ, ಸುನೀಲ್ ರಕ್ಷೆ, ಜಯವಂತ ಬಾಳೆಕುಂದ್ರಿ, ನಾರಾಯಣ ಲೋಹಾರ್, ಕೃಷ್ಣ ಹೊನಗೆಕರ್ ಗ್ರಾಮ ಪಂಚಾಯತ್ ಸದ್ಯಸರು ಹಾಗೂ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.
ಮಂದಿರದ ಸ್ಲ್ಯಾಬ್ ನಿರ್ಮಾಣ ಕಾಮಗಾರಿಗೆ ಚಾಲನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ