
ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ಇಡೀ ಜಗತ್ತು ಸಂಭ್ರಮದಲ್ಲಿದ್ದರೆ ಇತ್ತ ಅಮೆರಿಕಕ್ಕೆ ಶೀತಮಾರುತ ಕಂಟಕವಾಗಿ ಪರಿಣಮಿಸಿದೆ.
ಪೂರ್ವ ಅಮೆರಿಕದ ಕೆಲ ಭಾಗಗಳಲ್ಲಿ ತೀವ್ರ ಹಿಮಪಾತ ಮತ್ತು ಚಳಿ ಆವರಿಸಿಕೊಂಡಿದ್ದು, ಕೊಲರಾಡೊದಲ್ಲಿ 4 ಮತ್ತು ನ್ಯೂಯಾರ್ಕ್‌ನಲ್ಲಿ 12 ಮಂದಿ ಸೇರಿ 9 ರಾಜ್ಯಗಳಲ್ಲಿ ಹವಾಮಾನದ ವೈಪರೀತ್ಯಕ್ಕೆ 31ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.
48 ರಾಜ್ಯಗಳಲ್ಲಿ ತೀವ್ರ ಚಳಿ ಆವರಿಸಿದ್ದು, ತಾಪಮಾನ ಮೈನಸ್ ಡಿಗ್ರಿ ತಲುಪಿದೆ. ಪಶ್ಚಿಮ ನ್ಯೂಯಾರ್ಕ್‌ನ ಬಫೆಲೊ ನಗರದಲ್ಲಿ ಹಿಮಪಾತ ಹೆಚ್ಚಿದ್ದು, ನಗರ ಪೂರ್ತಿ ಹಿಮದಲ್ಲಿ ಮುಳುಗಿದೆ. ಸಾವಿರಾರು ವಿಮಾನಗಳ ಸಂಚಾರ ರದ್ದಾಗಿದೆ. ಮನೆಗಳು ಹಿಮದಿಂದ ಸುತ್ತುವರಿದಿವೆ.
ಅನೇಕ ಕಡೆಗಳಲ್ಲಿ ತುರ್ತು ಸೇವೆಗಳನ್ನು ಒದಗಿಸಲು ಕೂಡ ಸಾಧ್ಯವಾಗುತ್ತಿಲ್ಲ. ರಸ್ತೆಗಳ ಬದಿಯಲ್ಲಿರುವ ವಾಹನಗಳು ಹಿಮದಿಂದ ಮುಚ್ಚಿಹೋಗಿದ್ದು ಅವುಗಳ ಮಾಲೀಕರು ಹೊರ ತೆಗೆಯಲು ಹೆಣಗಾಡುತ್ತಿದ್ದಾರೆ. ಕೆಲವೆಡೆ ಎಂಟು ಅಡಿ (2.4-ಮೀಟರ್) ಗಿಂತಲೂ ಹೆಚ್ಚು ಎತ್ತರದ ಹಿಮದ ರಾಶಿ ಬಿದ್ದಿದ್ದು, ವಿದ್ಯುತ್ ಸಂಪರ್ಕ ಕೂಡ ಸಂಪೂರ್ಣ ಕಡಿತಗೊಳಿಸಲಾಗಿದೆ.
ನವಜೋಡಿಗೆ ಪುನೀತರಾಜಕುಮಾರ್ ಫೋಟೋ ಉಡುಗೊರೆ
https://pragati.taskdun.com/puneetharajakumar-photo-gift-for-new-couple/
ಬೆಳಗಾವಿಯ ಪ್ರಸ್ತುತ ಅಧಿವೇಶನದಲ್ಲೇ ಶಿರಸಿ ಜಿಲ್ಲೆ ಘೋಷಣೆಯಾಗುತ್ತಾ? – ಏನಂದ್ರು ಕಾಗೇರಿ?
https://pragati.taskdun.com/will-sirsi-district-be-declared-in-belgaum-session-what-did-kageri-told/
ಯುವಕಾಂಗ್ರೆಸ್ ನಿಂದ ಸೋಮವಾರ ಸುವರ್ಣವಿಧಾನಸೌಧ ಮುತ್ತಿಗೆ
https://pragati.taskdun.com/suvarnavidhana-soudha-siege-by-yuva-congress/




