ಪ್ರಗತಿವಾಹಿನಿ ಸುದ್ದಿ: ಅಮೇರಿಕ ಅಧ್ಯಕ್ಷನಾಗಿ ಡೋನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಒಂದಲ್ಲ ಒಂದು ದಮನಕಾರಿ ನೀತಿಗಳಳನ್ನು ಜಾರಿಗೆ ತರುತ್ತಿದ್ದು, ಇದರ ಪರಿಣಾಮ ಅನೇಕ ರಾಷ್ಟ್ರಗಳ ಮೇಲೆ ಬೀರುತ್ತಿದೆ.
ಇದೀಗ ಅಮೇರಿಕ ಸರ್ಕಾರವು ವಲಸೆ ನೀತಿ ಬದಲಾವಣೆಯನ್ನು ಘೋಷಿಸಿದ್ದು, 75 ದೇಶಗಳ ನಾಗರಿಕರ ಇಮಿಗ್ರಂಟ್ (ಗ್ರೀನ್ ಕಾರ್ಡ್) ವೀಸಾ ಪ್ರಕ್ರಿಯೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ. ಈ ನಿರ್ಧಾರವು ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಸಾವಿರಾರು ವಲಸೆ ಆಕಾಂಕ್ಷಿಗಳಿಗೆ ನೇರ ಹೊಡೆತ ನೀಡಿದೆ.
ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರಕಾರ, ‘Public Charge’ ಮಾನದಂಡವನ್ನು ಇನ್ನಷ್ಟು ಕಠಿಣಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅಂದರೆ, ಅಮೆರಿಕಕ್ಕೆ ಶಾಶ್ವತವಾಗಿ ವಲಸೆ ಹೋಗುವವರು ಸರ್ಕಾರದ ಸಾಮಾಜಿಕ ನೆರವಿಗೆ ಅವಲಂಬಿತರಾಗುವ ಸಾಧ್ಯತೆ ಇದೆ ಎಂದು ಕಂಡುಬಂದರೆ, ಅವರ ವೀಸಾ ಅರ್ಜಿ ತಡೆಗಟ್ಟಲಾಗುತ್ತದೆ.
ಅಫ್ಘಾನಿಸ್ತಾನ್, ಅಲ್ವೇನಿಯಾ, ಅಲ್ಲೀರಿಯಾ, ಆಂಟಿಗುವಾ ಮತ್ತು ಬಾರ್ಬುಡಾ, ಕುವೈತ್, ಕಿರ್ಗಿಸ್ತಾನ್, ಲಾವೋಸ್, ಲೆಬನಾನ್, ಲೈಬೀರಿಯಾ, ಲಿಬಿಯಾ, ಮ್ಯಾಸೆಡೋನಿಯಾ, ಮೋಲ್ನೋವಾ, ಮಂಗೋಲಿಯಾ, ಮಾಂಟೆನೆಗ್ರ, ಮೊರಾಕ್ಕೊ ನೇಪಾಳ, ಅರ್ಮೇನಿಯಾ, ಅಜರ್ಬೈಜಾನ್, ಬಹಾಮಾಸ್, ಬಾಂಗ್ಲಾದೇಶ, ಬಾರ್ಬಡೋಸ್, ಬೆಲಾರಸ್, ಬೆಲೀಸ್, ಭೂತಾನ್, ಬೋಸ್ನಿಯಾ, ಬ್ರೆಜಿಲ್, ಬರ್ಮಾ (ಮ್ಯಾನ್ಮಾರ್), ಕಾಂಬೋಡಿಯಾ, ಕ್ಯಾಮರೂನ್, ಕೇಪ್ ವರ್ಡೆ, ಕೊಲಂಬಿಯಾ, ಐವರಿ ಕೋಸ್ಟ್ (ಕೋತ್ ದ್ಐವೋರ್ಸ್, ಕ್ಯೂಬಾ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಡೊಮಿನಿಕಾ, ಈಜಿಪ್ಟ್, ಎರಿಟ್ರಿಯಾ, ಇಥಿಯೋಪಿಯಾ, ಫಿಜಿ, ಗ್ಯಾಂಬಿಯಾ, ಜಾರ್ಜಿಯಾ, ಘಾನಾ, ಗ್ರೆನಡಾ, ಗ್ವಾಟೆಮಾಲಾ, ಗಿನಿ, ಹೈಟಿ, ಇರಾನ್, ಇರಾಕ್, ಜಮೈಕಾ, ಜೋರ್ಡಾನ್, ಕಜಾಕಿಸ್ತಾನ್, ಕೊಸೊವೊ, ನಿಕಾರಾಗುವಾ, ನೈಜೀರಿಯಾ, ಪಾಕಿಸ್ತಾನ್, ಕಾಂಗೋ ಗಣರಾಜ್ಯ ರಷ್ಯಾ ರುವಾಂಡಾ, ಸೇಂಟ್ ಕಿಟ್ಸ್ ಮತ್ತು ನೆವಿಸ್, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನೆಡೈನ್ಸ್, ಸೆನೆಗಲ್, ಸಿಯೆರಾ ಲಿಯೋನ್, ಸೊಮಾಲಿಯಾ, ದಕ್ಷಿಣ ಸೂಡಾನ್, ಸೂಡಾನ್, ಸಿರಿಯಾ, ಟಾಂಜಾನಿಯಾ, ಥೈಲ್ಯಾಂಡ್, ಟೋಗೋ, ಟುನೀಶಿಯಾ, ಉಗಾಂಡಾ, ಉರುಗೈ ಉಜ್ಜಿಕಿಸ್ತಾನ್, ಯೆಮನ್ ದೇಶಗಳು ಸೇರಿವೆ.
ಭಾರತ ಈ ಪಟ್ಟಿಯಲ್ಲಿ ಇಲ್ಲ. ಆದರೆ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್ ಸೇರಿದಂತೆ ಹಲವು ನೆರೆಯ ದೇಶಗಳು ಪಟ್ಟಿಯಲ್ಲಿರುವುದರಿಂದ, ಈ ನಿರ್ಧಾರ ದಕ್ಷಿಣ ಏಷ್ಯಾ ವಲಸೆ ಪ್ರಕ್ರಿಯೆಯ ಮೇಲೂ ಪರೋಕ್ಷ ಪರಿಣಾಮ ಬೀರುವ ಸಾಧ್ಯತೆ ಇದೆ.
ಅಮೇರಿಕಾ ಸರ್ಕಾರದ ಈ ನಿರ್ದಾರದಿಂದ ಟೂರಿಸ್ಟ್, ವಿದ್ಯಾರ್ಥಿ, ಉದ್ಯೋಗ ಅಥವಾ ಬಿಸಿನೆಸ್ ವೀಸಾಗಳು ಎಂದಿನಂತೆ ಮುಂದುವರಿಯಲಿವೆ.



