National

*ಅಮೇರಿಕಾ ಟು ಆಂಧ್ರ ಇನ್‌ಸ್ಟಾ ಲವ್: ಪ್ರತಿಗಾಗಿ ಭಾರತಕ್ಕೆ ಬಂದ ಚೆಲುವೆ*

ಪ್ರಗತಿವಾಹಿನಿ ಸುದ್ದಿ: ಲವ್ ಅಂದ್ರೆನೆ ಹಾಗೆ, ಅದಕ್ಕೆ ದೇಶ, ಭಾಷೆ, ಜಾತಿ, ಬಣ್ಣ ಇಲ್ಲ. ಪ್ರೇಮ ಎಲ್ಲದಕ್ಕೂ ಮೀರಿದ್ದು ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ತಾಜಾ ಉದಾಹಣೆ ಈ ಸ್ಟೋರಿ.

ಹೌದು.. ತಾನು ಪ್ರೀತಿಸಿದ ಯುವಕನಿಗಾಗಿ ದೂರದ ಅಮೇರಕಾದ ಯುವತಿ ಭಾರತದ ಪುಟ್ಟ ಹಳ್ಳಿಗೆ ಬಂದಿದ್ದಾಳೆ. ಇನ್‌ಸ್ಟಾಗ್ರಾಂನಲ್ಲಿ ಪ್ರೇಮಾಂಕುರವಾದ ನಂತರ ಪ್ರೇಮಿಯನ್ನು ಮದುವೆಯಾಗಲು ಛಾಯಾಗ್ರಾಹಕಿ ಜಾಕ್ವೆಲಿನ್ ಫೊರೆರೊ ಭಾರತದ ಆಂಧ್ರಕ್ಕೆ ಬಂದು ತಲುಪಿದ್ದಾರೆ.

Home add -Advt

ಆಂಧ್ರಪ್ರದೇಶದ ಚಂದನ್ ಹಾಗೂ ಅಮೆರಿಕಾದ ಜಾಕ್ವೆಲಿನ್ ಇನ್ಸ್ರಾಗ್ರಾಮ್‌ನಲ್ಲಿ ಪರಿಚಿತರಾದ ನಂತರ ಮಾತು ಮುಂದುವರೆದು ಇಬ್ಬರ ನಡುವೆ ಸಲುಗೆ ಬೆಳೆದಿದೆ. ಚಂದನ್ ಸರಳತೆಗೆ ಆಕರ್ಷಿತಳಾದ ಜಾಕ್ವೆಲಿನ್ ಪ್ರೇಮನಿವೇದನೆ ಮಾಡಿಕೊಂಡಿದ್ದಾರೆ.

ಇನ್‌ಸ್ವಾದಲ್ಲಿ ಒಂದು ‘ಹಾಯ್ ಮೂಲಕ ಪರಿಚಯವಾದವರು 14 ತಿಂಗಳು ಚಾಟ್ ಮಾಡಿದ ನಂತರ ಪ್ರೀತಿಯಲ್ಲಿ ಬಿದ್ದಿದ್ದಾರೆ. ನಂತರ ಮದುವೆಯಾಗಲು ನಿರ್ಧರಿಸಿದ್ದಾರೆ

ಸಂಗೀತ, ಕಲೆ ಮತ್ತು ಛಾಯಾಗ್ರಹಣದಲ್ಲಿ ಚಂದನ್‌ ಇದ್ದ ಉತ್ಸಾಹಕ್ಕೆ ನಾನು ಆಕರ್ಷಿತಳಾದೆ. 8 ತಿಂಗಳ ಕಾಲ ಆನ್‌ಲೈನ್‌ನಲ್ಲಿ ಡೇಟಿಂಗ್ ಮಾಡಿದ್ದೆವು. ನನ್ನ ತಾಯಿಯ ಅನುಮತಿ ಪಡೆದು ನಾನು ಭಾರತಕ್ಕೆ ಬಂದಿದ್ದೇನೆ ಎಂದು ಜಾಕ್ವೆಲಿಯಾ ಹೇಳಿಕೊಂಡಿದ್ದಾರೆ

ಈ ಜೋಡಿ ಈಗ ಅಮೆರಿಕದಲ್ಲಿ ತಮ್ಮ ಜೀವನವನ್ನು ಒಟ್ಟಿಗೆ ಪ್ರಾರಂಭಿಸಲು ಚಂದನ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದು ನಮ್ಮ ಜೀವನದ ಹೊಸ ಅಧ್ಯಾಯಕ್ಕಾಗಿ ನಾವಿಬ್ಬರೂ ಉತ್ಸುಕರಾಗಿದ್ದೇವೆಂದು ಹೇಳಿಕೊಂಡಿದ್ದಾರೆ.

Related Articles

Back to top button