National

*ದ್ವಿತೀಯ ಪಿಯುಸಿ ವಿದ್ಯಾರ್ಥಿ ಜೊತೆ ಮೂರನೇ ಮದುವೆಯಾದ ಮೂರು ಮಕ್ಕಳ ತಾಯಿ*

ಪ್ರಗತಿವಾಹಿನಿ ಸುದ್ದಿ : ಮೂರು ಮಕ್ಕಳ ತಾಯಿ ತನ್ನ ಎರಡನೆ ಮದಿವೆಗೆ ಗುಡ್ ಬೈ ಹೇಳಿ ಮುಸ್ಲಿಂ ಧರ್ಮದಿಂದ ಹಿಂದು ಧರ್ಮಕ್ಕೆ  ಮತಾಂತರಗೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿಯನ್ನು ಮೂರನೇ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶ ಅಮ್ರೋಹಾದಲ್ಲಿ ನಡೆದಿದೆ. 

ಮೊದಲು ಶಬ್ನಮ್ ಎಂದು ಕರೆಯಲ್ಪಡುತ್ತಿದ್ದ ಆ ಮಹಿಳೆ ಈಗ ಶಿವಾನಿ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದಾಳೆ. ಇದು ಆಕೆಗೆ ಮೂರನೇ ಮದುವೆ. ಶಿವಾನಿಯು ಪಕ್ಕದ ಮನೆಯ 12ನೇ ತರಗತಿ ವಿದ್ಯಾರ್ಥಿಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಳು, ಆಕೆ ಎರಡನೇ ಗಂಡನಿಗೆ ವಿಚ್ಛೇದನ ನೀಡಿ ಮೂವರು ಹೆಣ್ಣುಮಕ್ಕಳನ್ನು ಆತನ ಕಸ್ಟಡಿಯಲ್ಲಿ ಬಿಟ್ಟು, ಸ್ಥಳೀಯ ದೇವಸ್ಥಾನವೊಂದರಲ್ಲಿ ವಿದ್ಯಾರ್ಥಿಯನ್ನು ಮದುವೆಯಾಗಿದ್ದಾಳೆ.

Home add -Advt

ಕೆಲವು ದಿನಗಳ ಹಿಂದೆ ಎರಡೂ ಕುಟುಂಬಗಳ ನಡುವೆ ಪಂಚಾಯಿತಿ ನಡೆದಿತ್ತು, ಮಹಿಳೆ ವಯಸ್ಕಳಾಗಿರುವುದರಿಂದ ಅವಳು ಬಯಸಿದ ಸ್ಥಳದಲ್ಲಿ ವಾಸಿಸಲು ಸ್ವತಂತ್ರಳು ಎಂದು ನಿರ್ಧರಿಸಲಾಯಿತು. ಶಿವಾನಿ ತನ್ನ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದು, ತನ್ನ ನಿರ್ಧಾರದಿಂದ ತೃಪ್ತಳಾಗಿದ್ದಾಳೆ ಎಂದು ಹೇಳಿದರು. ವಿದ್ಯಾರ್ಥಿ ಕೂಡ ಅದನ್ನೇ ಹೇಳಿದ್ದು, ತಾವು ಸಂತೋಷವಾಗಿದ್ದೇವೆ ಮತ್ತು ಹಸ್ತಕ್ಷೇಪ ಬಯಸುವುದಿಲ್ಲ ಎಂದು ಹೇಳಿದ್ದಾನೆ

ಇದಕ್ಕೂ ಮೊದಲು, ಶಬ್ನಮ್ ಅಲಿಗಢದಲ್ಲಿ ವಿವಾಹವಾಗಿದ್ದರು, ಆದರೆ ನಂತರ ದಂಪತಿ ವಿಚ್ಛೇದನ ಪಡೆದರು. ಅವರ ಎರಡನೇ ಮದುವೆ ಸುಮಾರು ಎಂಟು ವರ್ಷಗಳ ಹಿಂದೆ ನಡೆದಿತ್ತು. ಒಂದು ವರ್ಷದ ಹಿಂದೆ, ಅವರ ಪತಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಅಂಗವಿಕಲರಾದರು, ನಂತರ ಆಕೆಯ ಸಂಬಂಧ ಬಾಲಕನೊಂದಿಗೆ ಶುರುವಾಗಿತ್ತು. 

Related Articles

Back to top button